Share this news

ಕಾರ್ಕಳ: ಐತಿಹಾಸಿಕ ಆನೆಕೆರೆ ಬಸದಿಯ ಪಂಚಕಲ್ಯಾಣ ಮಹೋತ್ಸವವು ಜ.18ರಿಂದ 22ರವರೆಗೆ ನಡೆಯುತ್ತಿದ್ದು, ಈ ಕಾರ್ಯಕ್ರಮವನ್ನು ವೀಕ್ಷಿಸಲು ನಾಡಿನ ಎಲ್ಲಡೆಯಿಂದ ಭಕ್ತಸಾಗರ ಕಾರ್ಕಳದತ್ತ ಹರಿದು ಬರುತ್ತಿದೆ. ಪ್ರತಿನಿತ್ಯ ಸುಮಾರು 25 ರಿಂದ 35 ಸಾವಿರ ಜನರು ಆನೆಕೆರೆ ಬಸದಿಯ ಪಂಚಲ್ಯಾಣ ಮಹೋತ್ಸವವನ್ನು ಕಣ್ತುಂಬಿಕೊಳ್ಳುತ್ತಿದ್ದಾರೆ.
ಪAಚಕಲ್ಯಾಣ ಮಹೋತ್ಸವಕ್ಕೆಂದು ಬರುವ ಭಕ್ತರಿಗೆ ಸಮಿತಿಯ ವತಿಯಿಂದ ಭರ್ಜರಿ ಊಟೋಪಚಾರದ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಕಾರ್ಕಳ ದಾನಶಾಲೆಯ ಬಾಹುಬಲಿ ಪ್ರವಚನ ಮಂದಿರದಲ್ಲಿ ಊಟದ ಹಾಗೂ ಉಪಹಾರದ ವ್ಯವಸ್ಥೆ ಮಾಡಲಾಗಿದ್ದು ನಿತ್ಯ ಸಾವಿರಾರು ಜನರು ಭೋಜನ ಹಾಗೂ ಉಪಹಾರವನ್ನು ಸ್ವೀಕರಿಸಿದ್ದಾರೆ.
ದೂರದ ಊರುಗಳಿಂದ ಬರುವ ಭಕ್ತರಿಗೆ ಮುಂಜಾನೆ ಹಾಗೂ ಸಂಜೆ ಉಪಹಾರ ಹಾಗೂ ಮಧ್ಯಾಹ್ನ ಭರ್ಜರಿ ಭೋಜನದ ವ್ಯವಸ್ಥೆಯನ್ನು ಮಾಡಲಾಗಿದೆ. ಪ್ರತಿನಿತ್ಯ ಸುಮಾರು 10 ಸಾವಿರಕ್ಕೂ ಮಿಕ್ಕಿ ಭಕ್ತರು ಭೋಜನ ಹಾಗೂ ಉಪಹಾರ ಸವಿಯುತ್ತಿದ್ದು, ಇಲ್ಲಿನ ಸ್ವಯಂಸೇವಕರು ಬಹಳ ಅಚ್ಚುಕಟ್ಟಾಗಿ ಎಲ್ಲಿಯೂ ಗೊಂದಲವಾಗದAತೆ ಕಾರ್ಯನಿರ್ವಹಿಸುತ್ತಿದ್ದಾರೆ
ಭಾನುವಾರ ರಜಾದಿನವಾಗಿರುವ ಹಿನ್ನಲೆಯಲ್ಲಿ ನಾಳೆ ಭಕ್ತರ ಸಂಖ್ಯೆ ಹೆಚ್ಚಳವಾಗುವ ನಿರೀಕ್ಷೆಯಿದೆ.
ಒಟ್ಟಾರೆಯಾಗಿ 5 ದಿನಗಳ ಪಂಚಕಲ್ಯಾಣ ಮಹೋತ್ಸವದಲ್ಲಿ ಭಕ್ತರ ಹಸಿವು ನೀಗಿಸುವ ಕೈಂಕರ್ಯದಲ್ಲಿ ಸಮಿತಿಯ ಸದಸ್ಯರು ನಿರತರಾಗಿದ್ದಾರೆ

ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ  ಲಿಂಕ್ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *