ಕಾರ್ಕಳ: ಬಜಗೋಳಿಯ ರಾಕ್ ಬಾಯ್ಸ್ ಕ್ರಿಕೆಟರ್ಸ್ ವತಿಯಿಂದ ಕಾರ್ಕಳದ ಸುರಕ್ಷಾ ಸೇವಾಶ್ರಮಕ್ಕೆ 30 ಸಾವಿರ ನಗದು ಧನಸಹಾಯ ಹಾಗೂ ಅನಾಥ ಬಂಧುಗಳಿಗೆ ಹಣ್ಣು ಹಂಪಲುಗಳನ್ನು ವಿತರಿಸಲಾಯಿತು.ಸುರಕ್ಷಾ ಸೇವಾಶ್ರಮದ ಆಯೇಷಾ ಈ ಧನಸಹಾಯವನ್ನು ಸ್ವೀಕರಿಸಿದರು
ರಾಕ್ ಬಾಯ್ಸ್ ಬಜಗೋಳಿ ಇದರ ವತಿಯಿಂದ 3ನೇ ಆವೃತ್ತಿಯ ರಾಕ್ ಬಾಯ್ಸ್ ಪ್ರೀಮಿಯರ್ ಲೀಗ್ ಕ್ರಿಕೆಟ್ ಪಂದ್ಯಾವಳಿಯನ್ನು ಆಯೋಜಿಸಲಾಗಿತ್ತು.ಈ ಪಂದ್ಯಾವಳಿಯಿಂದ ಉಳಿದ 30 ಸಾವಿರ ನಗದನ್ನು ರಾಕ್ ಬಾಯ್ಸ್ ಬಜಗೋಳಿ ಇದರ ಸದಸ್ಯರು ಸೇವಾಶ್ರಮಕ್ಕೆ ಭೇಟಿ ನೀಡಿ ವಿತರಿಸಿದರು.
ಯುವಕರ ಪರೋಪಕಾರ ಹಾಗೂ ಮಾನವೀಯ ನೆರವಿನ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ
ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ