Share this news

ಗದಗ (ಜ.22): ಹಿಂದೂಗಳ ಆರಾಧ್ಯ ದೈವವಾಗಿರುವ ಹಾಗೂ 500 ವರ್ಷಗಳ ನಿರಂತರ ಹೋರಾಟದ ಫಲವಾಗಿರುವ ಅಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನೆ ಹಾಗೂ ಬಾಲ ರಾಮನ ಮೂರ್ತಿ  ಪ್ರಾಣ ಪ್ರತಿಷ್ಠೆ ಮಾಡಲಾಗುತ್ತಿದೆ. ಗದಗ ಜಿಲ್ಲೆಯ ಕಿಡಿಗೇಡಿಯೊಬ್ಬ ರಾಮ ಮಂದಿರದ ಮೇಲೆ ಮುಸ್ಲಿಂ ಧ್ವಜಗಳನ್ನು ಹಾರಿಸುವಂತಹ ನಕಲಿ ಫೋಟೋವನ್ನು ಸೃಜಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಕೋಟ್ಯಂತರ ಹಿಂದೂಗಳ ಭಾವನೆಗೆ ಧಕ್ಕೆ ತಂದ ಬೆನ್ನಲ್ಲಿಯೇ ಪೊಲೀಸರು ಗದಗ ಜಿಲ್ಲೆಯ ಗಜೇಂದ್ರಗಡ  ತಾಜುದ್ದೀನ್ ದಫೆದಾರ್ ಎಂಬ ಯುವಕನನ್ನು ಬಂಧಿಸಿದ್ದಾರೆ.

ರಾಮ ಮಂದಿರ ಉದ್ಘಾಟನೆಯು ಜಗತ್ತಿನ 100 ಕೋಟಿಗೂ ಅಧಿಕ ಹಿಂದೂಗಳು ಸಂಭ್ರಮಿಸುವಂತಹ ಆಚರಣೆಯಾಗಿದೆ. ಆದರೆ, ಹಿಂದೂಗಳ ಭಾವನೆಗಳಿಗೆ ಧಕ್ಕೆ ತರುವಂತಹ ಚಿತ್ರವನ್ನು ಮುಸ್ಲಿಂ ಯುವಕನೊಬ್ಬ ಸೃಜಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇಂತಹ ಪೋಸ್ಟ್ ಗಮನಿಸಿದ ಹಿಂದೂಪರ ಸಂಘಟನೆಗಳು  ಪೊಲೀಸರಿಗೆ ದೂರು ನೀಡಿದ್ದರು. ಯುವಕನನ್ನ ವಶಕ್ಕೆ ಪಡೆದು ಪೋಸ್ಟ್ ಡಿಲೀಟ್ ಮಾಡಿಸಿದ್ದಾರೆ. ರಾಮ ಮಂದಿರ ಫೋಟೋವನ್ನು ತಿರುಚಿದ ಪೋಸ್ಟ್ ನ ಸ್ಕ್ರೀನ್ ಶಾಟ್ ಸಾಮಾಜಿಕ ಜಾತಲಾಣದಲ್ಲಿ ವೈರಲ್ ಆಗುತ್ತಿದೆ. ಯುವಕನ ವಿರುದ್ಧ ಕಾನೂನು ಹಿಂದೂಪರ ಸಂಘಟನೆ ಪಟ್ಟು ಹಿಡಿದಿವೆ. ಈ ಬಗ್ಗೆ ವಿಚಾರಣೆ ನಡೆಸಿ ಕಾನೂನು ಕ್ರಮ ಕೈಗೊಳ್ಳುವ ಬಗ್ಗೆ ಪೊಲೀಸ್ ಇಲಾಖೆ ಭರವಸೆಯನ್ನು ನೀಡಿದೆ.

ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ  ಲಿಂಕ್ ಕ್ಲಿಕ್ ಮಾಡಿ

Leave a Reply

Your email address will not be published. Required fields are marked *