ಹೆಬ್ರಿ: ತಂದೆತಾಯಿ ಕಣ್ಣಿಗೆ ಕಾಣುವ ದೇವರು ಎನ್ನುವುದು ಸಾರ್ವಕಾಲಿಕ ಸತ್ಯ,ಮಗುವನ್ನು ಹೆತ್ತುಹೊತ್ತು ಅದನ್ನು ಸಮಾಜದ ಉತ್ತಮ ನಾಗರಿಕನಾಗಿ ರೂಪಿಸುವ ನಿಟ್ಟಿನಲ್ಲಿ ಪೋಷಕರು ತ್ಯಾಗ ಅನನ್ಯವಾಗಿದೆ,ಆದ್ದರಿಂದ ಮಕ್ಕಳಿಂದ ತಂದೆತಾಯಿ ಋಣ ತೀರಿಸಲು ಸಾಧ್ಯವಿಲ್ಲ, ಜೀವನದಲ್ಲಿ ಹೆತ್ತವರಿಗೆ ನೋವು ನೀಡದೇ ಅವರ ಸೇವೆ ಮಾಡುವುದೇ ಮಕ್ಕಳ ಕರ್ತವ್ಯವಾಗಿದೆ ಎಂದು ವಿದ್ವಾನ್ ದಾಮೋದರ ಶರ್ಮಾ ಹೇಳಿದರು.
ಅವರು ಜ.25ರಂದು ಗುರುವಾರ ಹೆಬ್ರಿಯ ಪಿ ಆರ್ ಎನ್ ಅಮೃತಭಾರತಿ ವಿದ್ಯಾಲಯ ಮತ್ತು ಅಮೃತ ಭಾರತಿ ವಿದ್ಯಾಕೇಂದ್ರದಲ್ಲಿ ಮಾತೃವಂದನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ತಂದೆ ತಾಯಿ ಋಣ ಪರಿಹರಿಸಲಾಗದ್ದು, ವಿದ್ಯಾರ್ಥಿಗಳ ಜೀವನದಲ್ಲಿ ಪೋಷಕರ ಕೊಡುಗೆ ಅನನ್ಯವಾದುದು. ತಪ್ಪುಗಳಾಗದಂತೆ ಎಚ್ಚರಿಕೆಯಿಂದ ಅದನ್ನು ತಿದ್ದಿಕೊಂಡು ವಿದ್ಯಾರ್ಥಿಗಳಾದವರು ದೇಶದ ಉತ್ತಮ ಪ್ರಜೆಗಳಾಗಬೇಕೆಂದು ಕಿವಿಮಾತು ಹೇಳಿದರು.
ಈ ಸಂದರ್ಭದಲ್ಲಿ ಅಮೃತಭಾರತಿ ಟ್ರಸ್ಟ್ ನ ಕಾರ್ಯದರ್ಶಿ ಗುರುದಾಸ್ ಶೆಣೈ, ಬಾಲಕೃಷ್ಣ ಮಲ್ಯ, ಯೋಗೀಶ್ ಭಟ್, ಸತೀಶ್ ಪೈ, ಸುಧೀರ್ ನಾಯಕ್, ಶೈಲೇಶ್ ಕಿಣಿ, ರಾಜೇಶ್ ನಾಯಕ್, ವಿಷ್ಣುಮೂರ್ತಿ ನಾಯಕ್ ಹಾಗೂ ಸಂಸ್ಥೆಯ ಮುಖ್ಯಸ್ಥರಾದ ಅಮರೇಶ್ ಹೆಗ್ಡೆ, ಅಪರ್ಣಾ ಆಚಾರ್, ಅರುಣ್ ಕುಮಾರ್, ಅನಿತಾ, ತರಗತಿ ಶಿಕ್ಷಕರಾದ ಮಹೇಶ್ ಹೈಕಾಡಿ, ವೇದವ್ಯಾಸ ತಂತ್ರಿ, ಪ್ರೀತಿ.ಬಿ.ಕೆ , ಮಾಲಾಶ್ರೀ ಹಾಗೂ ಗುರೂಜಿ ಮಾತಾಜಿ, ಪೋಷಕರು ಉಪಸ್ಥಿತರಿದ್ದರು.
ಧಾರ್ಮಿಕ ಪ್ರಕ್ರಿಯೆಗಳನ್ನು ಉಪನ್ಯಾಸಕ ವಿದ್ವಾನ್ ಹರಿಶ್ಚಂದ್ರ ನೆರವೇರಿಸಿ, ವಿದ್ವಾನ್ ವೇದವ್ಯಾಸ ತಂತ್ರಿ ಮಡಾಮಕ್ಕಿ ವಂದಿಸಿದರು.
ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ
ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ