ಉಡುಪಿ: ವಿದ್ಯಾಭಾರತಿ, ಸಂವಿತ್ ಯೋಗ ರಿಸರ್ಚ್ ಫೌಂಡೇಶನ್ ಬೆಂಗಳೂರು ಇವುಗಳ ಜಂಟೀ ಆಶ್ರಯದಲ್ಲಿ ಸರಸ್ವತಿ ವಿದ್ಯಾಲಯ ಸಿದ್ದಾಪುರ ಸಹಯೋಗದಲ್ಲಿ ಸರಸ್ವತಿ ಮಾತೃಭಾರತಿ ಸಿದ್ಧಾಪುರ ಇದರ ಮಾತೆಯರಿಗಾಗಿ ಆಯೋಜಿಸಿದ ನಿತ್ಯ ಸರಳ ಯೋಗ ಶಿಬಿರವನ್ನು ಸಿದ್ದಾಪುರದ ಸರಸ್ವತಿ ಮಾತೃ ಭಾರತಿಯ ಸಂಯೋಜಕಿ ಮಲ್ಲಿಕಾ ಉದ್ಘಾಟಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉಡುಪಿ ಜಿಲ್ಲಾ ವಿದ್ಯಾಭಾರತಿಯ ಅಧ್ಯಕ್ಷ ಪಾಂಡುರಂಗ ಪೈ ವಹಿಸಿ ಮಾತನಾಡಿ, ಯೋಗ ದೇಹ ಮತ್ತು ಮನಸ್ಸನ್ನು ಕೇಂದ್ರೀಕರಿಸುವ ಉತ್ತಮ ವಿಧಾನ ಹಾಗೂ ಮಾನಸಿಕ ,ದೈಹಿಕವಾಗಿ ಸದೃಢವಾಗಿರಲು ಬಹಳ ಮುಖ್ಯ ಎಂದು ಕಾರ್ಯಕ್ರಮದ ಯಶಸ್ಸಿಗೆ ಶುಭ ಕೋರಿದರು
ವಿದ್ಯಾ ಭಾರತಿ ಯ ಕಾರ್ಯದರ್ಶಿ ಮಹೇಶ್ ಹೈಕಾಡಿ ಯೋಗದಿಂದ ಆರೋಗ್ಯ ಮತ್ತು ಮನಸ್ಸನ್ನು ಸಮತೋಲನದಲ್ಲಿ ಇಟ್ಟುಕೊಳ್ಳಬಹುದು ಹಾಗೂ ಯೋಗವನ್ನ ಜೀವನದುದ್ದಕ್ಕೂ ನಿತ್ಯ ಸರಳ ಹವ್ಯಾಸವೆಂಬಂತೆ ಅಳವಡಿಸಿಕೊಳ್ಳಬೇಕು ಎಂಬುದನ್ನು ಪ್ರಾಸ್ತಾವಿಕ ನುಡಿಗಳಲ್ಲಿ ತಿಳಿಸಿದರು.
ಸರಸ್ವತಿ ಮಾತೃಭಾರತಿ ಸಮಿತಿಯ ಕಾರ್ಯದರ್ಶಿ ಸೌಮ್ಯ , ಸಂಸ್ಥೆಯ ಪ್ರಾಂಶುಪಾಲೆ ಸೌಭಾಗ್ಯ ಹೆಗಡೆ ಇವರು ಉಪಸ್ಥಿತರಿದ್ದರು.
ಮಾತೃ ಭಾರತಿ ಪ್ರಮುಖ್ ಸಿಂಧು,ಹೆಚ್,ಐತಾಳ್ ಮತ್ತು ವಿದ್ಯಾಭಾರತಿ ಕರ್ನಾಟಕ ಉಡುಪಿ ಜಿಲ್ಲಾ ಯೋಗ ಪ್ರಮುಖ್ ಸಂಜಯ್ ಸಿ . ವಿ. ನಿತ್ಯ ಸರಳ ಯೋಗ ಕಾರ್ಯಗಾರ ನಡೆಸಿಕೊಟ್ಟರು. ಅಷ್ಟಾಂಗ ಯೋಗದ ಮಹತ್ವವನ್ನು ತಿಳಿಸುತ್ತಾ ಎರಡು ಗಂಟೆಗಳ ಕಾಲ ಮಾತೆಯರಿಗೆ ಕೆಲವು ಸರಳ ಯೋಗಾಸನ ಹಾಗೂ ಅದರ ಪ್ರಯೋಜನವನ್ನು ಪ್ರಾತ್ಯಕ್ಷಿಕೆಯ ಮೂಲಕ ವಿವರಿಸಿದರು.ಕಾರ್ಯಾಗಾರಕ್ಕೆ 25 ಮಾತೆಯರು ಭಾಗವಹಿಸಿ ಪ್ರಯೋಜನವನ್ನು ಪಡೆದರು.
ವಿದ್ಯಾಭಾರತಿ ಪ್ರಶಿಕ್ಷಣ ಪ್ರಮುಖ್ ನವ್ಯಾ ಕಾರ್ಯಕ್ರಮವನ್ನು ನಿರೂಪಿಸಿದರು , ಸರಸ್ವತಿ ಮಾತೃಭಾರತಿ ಸಮಿತಿಯ ಸದಸ್ಯೆ ಪೂರ್ಣಿಮಾ ಸ್ವಾಗತಿಸಿದರು, ರಶ್ಮಿ ವಂದಿಸಿದರು.
ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ
ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ ಲಿಂಕ್ ಕ್ಲಿಕ್ ಮಾಡಿ