Share this news

ಚಾಮರಾಜನಗರ:ಸರ್ಕಾರಿ ಆಸ್ಪತ್ರೆಗಳಿಗೆ ಜನರು ಬಂದಾಗ ಅವರಿಂದ ಹೊರಗಡೆ ಔಷಧಿ ತೆಗೆದುಕೊಳ್ಳಿ ಎಂದು ವೈದ್ಯರು ಚೀಟಿ ಬರೆದುಕೊಡುವುದನ್ನು ನಾನು ಗಮನಿಸಿದ್ದೇನೆ, ಆದರೆ ಇನ್ನು ಮುಂದೆ ಇಂತಹ ಘಟನೆ ನಡೆಯಬಾರದು ವಿನಾಕಾರಣ ಹೊರಗೆ ಚೀಟಿ ಬರೆದುಕೊಟ್ಟಲ್ಲಿ ಕ್ರಮ ಜರುಗಿಸಬೇಕಾಗುತ್ತದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ. ಅವರು ಸೋಮವಾರ ಚಾಮರಾಜನಗರ ಜಿಲ್ಲೆಯ ಕೊಳ್ಳೆಗಾಲದಲ್ಲಿ ಬೃಹತ್ ಆರೋಗ್ಯ ಮೇಳ ಉದ್ಘಾಟಿಸಿ ಅವರು ಮಾತನಾಡಿ,ಔಷಧಿ ಸರಬರಾಜಿನಲ್ಲಿ ಸ್ವಲ್ಪ ಸಮಸ್ಯೆಯಾಗಿರುವುದು ನಿಜ. ಮುಂದಿನ ಮೂರು ನಾಲ್ಕು ತಿಂಗಳಲ್ಲಿ ಇದು ಪರಿಹಾರವಾಗಲಿದೆ. ಸರ್ಕಾರಿ ಆಸ್ಪತ್ರೆಯಲ್ಲಿ ಎಲ್ಲ ಬಗೆಯ ಔಷಧಿಗಳು ದೊರೆಯುವಂತೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಇದೇ ವೇಳೆ ಭರವಸೆ ನೀಡಿದರು.
ಜನರ ಬಳಿಗೆ ಆರೋಗ್ಯ ಸೇವೆಗಳನ್ನು ಕೊಂಡೊಯ್ಯುವ ನಿಟ್ಟಿನಲ್ಲಿ ರಾಜ್ಯದ ಹಳ್ಳಿಗಾಡಿನ ಜನರಿಗೆ ಅನುಕೂಲವಾಗುವ ರೀತಿಯಲ್ಲಿ ಸರ್ಕಾರದಿಂದ ಆರೋಗ್ಯ ಮೇಳಗಳನ್ನುಜ ಹಮ್ಮಿಕೊಳ್ಳಲು ವಿಶೇಷ ಕಾರ್ಯಕ್ರಮ ರೂಪಿಸುವುದಾಗಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಹೇಳಿದ್ದಾರೆ.ಸಹಸ್ರಾರು ಸಂಖ್ಯೆಯಲ್ಲಿ ಹಳ್ಳಿಗಾಡಿನ ಜನರು ಕೊಳ್ಳೆಗಾಲದ ಆರೋಗ್ಯ ಮೇಳಕ್ಕೆ ಆಗಮಿಸಿ, ಆರೋಗ್ಯ ತಪಾಸಣೆಗೆ ಆಸಕ್ತಿ ತೋರಿದ್ದನ್ನ ನೋಡಿದರೆ ಆರೋಗ್ಯ ಮೇಳಗಳ ಅಗತ್ಯೆತೆಯನ್ನ ನಾವು ಮನಗಾಣಬೇಕಿದೆ. ಇಷ್ಟೊಂದು ಸಂಖ್ಯೆಯಲ್ಲಿ ಜನರ ಸ್ಪಂದನೆ ಸಿಗಲಿದೆ ಎಂದು ನಿರೀಕ್ಷಿಸಿರಲಿಲ್ಲ. ಕೊಳ್ಳೆಗಾಲದ ಈ ಆರೋಗ್ಯ ಮೇಳ ರಾಜ್ಯ ಮಟ್ಟದ ಒಂದು ಆರೋಗ್ಯ ಮೇಳ ಕಾರ್ಯಕ್ರಮ ರೂಪಿಸಲು ಮುನ್ನುಡಿ ಬರೆಯಲಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಆರೋಗ್ಯ ಇಲಾಖೆಯನ್ನ ಜನರ ಬಳಿಗೆ ಕೊಂಡೊಯ್ಯುವ ಉದ್ದೇಶದಿಂದ ಹಲವು ಕಾರ್ಯಕ್ರಮಗಳನ್ನ ಹಾಕಿಕೊಳ್ಳಲಾಗಿದೆ. ಅದರಲ್ಲಿ ಆರೋಗ್ಯ ಮೇಳವೂ ಒಂದು. ಈ ಮೊದಲು ಬೆಂಗಳೂರಿನ ಗಾಂಧಿ ನಗರ ಕ್ಷೇತ್ರದಲ್ಲಿ ಮೊದಲ ಆರೋಗ್ಯ ಮೇಳವನ್ನ ಆಯೋಜಿಸಲಾಗಿತ್ತು. ಅಲ್ಲಿ ಜನರಿಂದ ವ್ಯಕ್ತವಾದ ಉತ್ತಮ ಸ್ಪಂದನೆ ನೋಡಿ, ಆರೋಗ್ಯ ಮೇಳಗಳನ್ನ ಹಿಂದುಳಿದ ಜಿಲ್ಲೆಗಳ ಗ್ರಾಮೀಣ ಪ್ರದೇಶಗಳ ಜನರಿಗೆ ಅನುಕೂಲವಾಗುವ ರೀತಿಯ ಸ್ಥಳಗಳಲ್ಲಿ ಆಯೋಜಿಸಲು ಅಧಿಕಾರಿಗಳಿಗೆ ಸೂಚಿಸಿದ್ದೆ. ಕೊಳ್ಳೆಗಾಲದಲ್ಲಿ ಆರೋಗ್ಯ ಮೇಳವನ್ನ ನಡೆಸಲು ತೀರ್ಮಾನಿಸಲಾಯಿತು. ಇದಕ್ಕೆ ಆರೋಗ್ಯ ಇಲಾಖೆ ಅಧಿಕಾರಿಗಳು ಉತ್ಸುಕತೆ ತೋರಿಸಿದರು ಎಲ್ಲದರ ಫಲವಾಗಿ ಇಂದು ಗ್ರಾಮೀಣ ಭಾಗದ ಜನರಿಗೆ ತಮ್ಮ ಆರೋಗ್ಯ ತಪಾಸಣೆಗೆ ಅನುಕೂಲವಾಗುತ್ತಿದೆ. ಇದನ್ನ ರಾಜ್ಯದ ಮೂಲೆ ಮೂಲೆಗಳಿಗೂ ಕೊಂಡೊಯ್ಯುತ್ತೇವೆ.

ಬಿ.ಪಿ, ಶುಗರ್, ಕಣ್ಣಿನ ತಪಾಸಣೆಯಿಂದ ಹಿಡಿದು ಹೃದಯ ಸಂಬAಧಿ ಕಾಯಿಲೆಗಳು, ಕಿಡ್ನಿ ಸಮಸ್ಯೆ, ಕ್ಯಾನ್ಸರ್ ನಂತಹ ಕಾಯಿಲೆಗಳಿದ್ದರು ಆರೋಗ್ಯ ಮೇಳದಲ್ಲಿ ತಪಾಸಣೆ ನಡೆಸಿಕೊಂಡು ಅದಕ್ಕೆ ಚಿಕಿತ್ಸೆ ಪಡೆಯಬಹುದಾಗಿದೆ. ಅಲ್ಲದೇ ಮೇಳಕ್ಕೆ ಬಂದು ತಮ್ಮ ಆರೋಗ್ಯ ಸಮಸ್ಯೆ ಹೇಳಿಕೊಂಡವರನ್ನ ಗುಣಮುಖರಾಗಿಸುವ ವರೆಗೂ ಇಲಾಖೆಯ ಅಧಿಕಾರಿ ಸಿಬ್ಬಂದಿ ವರ್ಗದವರು ಫಾಲೋ ಅಪ್ ಮಾಡಲಿದ್ದಾರೆ. ಶಸ್ತ್ರ ಚಿಕಿತ್ಸೆಯ ಅಗತ್ಯವಾಗಿದ್ದರೆ, ಸರ್ಕಾರಿ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಕೊಡಿಸಲಿದ್ದಾರೆ. ಸಮಗ್ರ ಆರೋಗ್ಯ ಸೇವೆಯನ್ನ ಆರೋಗ್ಯ ಮೇಳದಲ್ಲಿ ಒದಗಿಸಲಾಗುತ್ತಿದೆ ಎಂದು ಸಚಿವ ದಿನೇಶ್ ಗುಂಡೂರಾವ್ ಹೇಳಿದರು.

 
 

 

 
 

 

Leave a Reply

Your email address will not be published. Required fields are marked *