Share this news

ಕುಂದಾಪುರ: ಬೈಂದೂರು ತಾಲೂಕಿನ ಮೂದೂರು, ಜಡ್ಕಲ್, ಬೆಳ್ಕಲ್ ಪರಿಸರದಲ್ಲಿ ಹಸಿರು ಬಣ್ಣದ ಸಮವಸ್ತ್ರ ಧರಿಸಿ ಶಸ್ತ್ರಸಜ್ಜಿತ ತಂಡ ಕೆಲವು ಮನೆಗಳಿಗೆ ಭೇಟಿ ನೀಡಿದ್ದಾರೆ ಎನ್ನಲಾಗಿದ್ದು, ಈ ನಿಟ್ಟಿನಲ್ಲಿ ಪೊಲೀಸ್‌ ಇಲಾಖೆ ಎಚ್ಚರ ವಹಿಸಿದೆ ಎನ್ನಲಾಗಿದೆ.

ಎರಡು ತಿಂಗಳುಗಳಿಂದ ಈ ಪರಿಸರಗಳಲ್ಲಿ ನಕ್ಸಲ್ ಚಟುವಟಿಕೆ ನಡೆಯುತ್ತಿರುವ ಶಂಕೆಯಿದ್ದು, ನಾಲ್ವರನ್ನು ಒಳಗೊಂಡ ತಂಡ ಹಲವು ಮನೆಗಳಿಗೆ ಭೇಟಿ ನೀಡುತ್ತಿದೆ ಎನ್ನಲಾಗಿದೆ. ಯೂನಿಫಾರಂ ಹಾಕಿದ ನಾಲ್ವರಿದ್ದ ತಂಡ ಈ ಪರಿಸರದ ಕೆಲವು ಮನೆಗಳಿಗೆ ಭೇಟಿ ಮಾಡಿದೆ. ನಾಲ್ವರ ಪೈಕಿ ಇಬ್ಬರಲ್ಲಿ ಶಸ್ತ್ರಾಸ್ತ್ರಗಳಿದ್ದವು ಎನ್ನಲಾಗಿದೆ. ಕೆಲವು ಮನೆಯವರು ನಕ್ಸಲರ ಭೇಟಿಗೆ ಅವಕಾಶ ನೀಡಿಲ್ಲ. ಕೆಲವು ಮನೆಯವರ ಬಳಿ ರಾತ್ರಿ ವೇಳೆ ಕಿಟಕಿಯಿಂದಷ್ಟೇ ಮಾತಾಡಿ ಹೋಗಿದ್ದಾರೆ. ಎರಡು ದಿನಗಳ ಹಿಂದೆಯೂ ಕೆಲವು ಮನೆಗಳಿಗೆ ಇವರು ಭೇಟಿ ನೀಡಿದ್ದಾರೆ ಎನ್ನುವ ಮಾಹಿತಿ ಲಭಿಸಿದೆ.

ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಳೆದ 10 ವರ್ಷಗಳಿಂದ ನಕ್ಸಲ್ ಚಟುವಟಿಕೆ ಸಂಪೂರ್ಣವಾಗಿ ಸ್ಥಗಿತಗೊಂಡಿತ್ತು. ಇದರಿಂದಾಗಿ ನಕ್ಸಲ್ ನಿಗ್ರಹ ದಳದ ಪೊಲೀಸರು ಕೆಲಸವಿಲ್ಲದೇ ಖಾಲಿ ಕೂರುವಂತಾಗಿತ್ತು.ಇದಲ್ಲದೇ ನಕ್ಸಲ್ ನಿಗ್ರಹ ದಳದ ಸಿಬ್ಬಂದಿಗಳಿಗೆ ಸರ್ಕಾರ ವಾರ್ಷಿಕ ಕೋಟ್ಯಾಂತರ ರೂಪಾಯಿ ಖರ್ಚು ಮಾಡುವಂತಾಗಿದೆ. ಇದೀಗ ಪಶ್ಚಿಮ ಘಟ್ಟದ ತಪ್ಪಲಿನಲ್ಲ ಮತ್ತೆ ನಕ್ಸಲರ ಓಡಾಟದ ಸುದ್ದಿ ಸಾಕಷ್ಟು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ.ನಕ್ಸಲರ ಹೆಸರಿನಲ್ಲಿ ಇನ್ಯಾರೋ ಈ ಕೃತ್ಯ ಎಸಗಿರಬಹುದೇ ಎನ್ನುವ ಸಂದೇಹವೂ ಮೂಡಿದೆ

ಉಡುಪಿ, ಮಂಗಳೂರಿನಲ್ಲಿ ಕೆಲಸ ಬೇಕೇ? ಸರ್ಕಾರಿ, ಅರೆಸರ್ಕಾರಿ, ಖಾಸಗಿ ಕಂಪೆನಿಗಳ ಉದ್ಯೋಗಾವಕಾಶಗಳ ಕುರಿತ ಸಂಪೂರ್ಣ ವಿವರಗಳಿಗೆ ಈ  ಲಿಂಕ್ ಕ್ಲಿಕ್ ಮಾಡಿ

 

 

 

 
 

 

 
 

Leave a Reply

Your email address will not be published. Required fields are marked *