Share this news

ಕಾರ್ಕಳ :ವಿವೊ ಇಗ್ನೈಟ್ ಟೆಕ್ನಾಲಜಿ ಮತ್ತು ಇನ್ನೋವೇಶನ್ ಅವಾರ್ಡ್ಸ್-2023 ಸಮಾರಂಭವು ಫೆ.10 ರಂದು ನವದೆಹಲಿಯ ವಸಂತ್‌ ಕುಂಜ್‌ನ ದಿ ಗ್ರ್ಯಾಂಡ್‌ನಲ್ಲಿ ನಡೆಯಿತು.
ಈ ಸಮಾರಂಭದಲ್ಲಿ ನಿಟ್ಟೆಯ ಅನುಷ್ ಅರುಣ್ ಕೆ. ಮತ್ತು ಎಂ.ವೃಂದಾ ಶೆಣೈ ತಲಾ 25 ಸಾವಿರ ರೂ. ಬಹುಮಾನ ಹಾಗೂ ಪ್ರಮಾಣ ಪತ್ರ ಪಡೆದುಕೊಂಡಿದ್ದಾರೆ.
10 ರಾಷ್ಟ್ರೀಯ ಫೈನಲಿಸ್ಟ್‌ಗಳು ಅತ್ಯಂತ ವೈಜ್ಞಾನಿಕವಾಗಿ ನವೀನ ಮತ್ತು ಸಾಮಾಜಿಕವಾಗಿ ಸಂಬಂಧಿತ ಮಾದರಿಗಳನ್ನು ಪ್ರಸ್ತುತಪಡಿಸಿದ್ದರು. ಈ ಪೈಕಿ ಟಾಪ್ 5 ಅನ್ನು ರಾಷ್ಟ್ರೀಯ ವಿಜೇತರು ಎಂದು ಘೋಷಿಸಲಾಯಿತು.

8 ರಿಂದ 12ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ನಡೆಸುವ ಈ ಸ್ಪರ್ಧೆಯಲ್ಲಿ ಈ ವರ್ಷ “ಉತ್ತಮ ತಂತ್ರಜ್ಞಾನ ಮತ್ತು ಸಾಮಾಜಿಕ ಪರಿಣಾಮಕ್ಕಾಗಿ ನಾವೀನ್ಯತೆ” ಎಂಬ ಥೀಮ್ ನೊಂದಿಗೆ ವಿಜ್ಞಾನ ಮಾದರಿ ಪ್ರದರ್ಶನ ಹಾಗೂ ಸ್ಪರ್ಧೆ ನಡೆಯಿತು. ಭಾರತಾದ್ಯಂತ ಒಟ್ಟು 19 ಸಾವಿರ ವಿದ್ಯಾರ್ಥಿಗಳು ನೋಂದಣಿ ಮಾಡಿದ್ದು 4 ಸಾವಿರಕ್ಕೂ ಹೆಚ್ಚು ಪ್ರಾಜೆಕ್ಟ್‌ಗಳನ್ನು ಸ್ವೀಕರಿಸಲಾಗಿತ್ತು.ಇದರಲ್ಲಿ ಟಾಪ್ 10ರ ಫೈನಲಿಸ್ಟ್‌ಗಳಾಗಿ ನಿಟ್ಟೆಯ ಎನ್ಎಸ್ಎಎಂನ ಅನುಷ್ ಅರುಣ್ ಕೆ. ಮತ್ತು ಎಂ.ವೃಂದಾ ಶೆಣೈ ಅವರ ದ. ಕಾರ್ಬನ್ ನ್ಯೂಟ್ರಿಲೈಸರ್ನ್ ಎಂಬ ಮಾದರಿಯು ಆಯ್ಕೆಯಾಗಿತ್ತು.
ವಿದ್ಯಾರ್ಥಿಗಳ ಸಾಧನೆಗೆ ರಾಜೇಂದ್ರ ಪ್ರಸಾದ್ ಸಿಂಗ್, ಮುಖ್ಯ ವಿಜ್ಞಾನಿ ಮತ್ತು ಮುಖ್ಯಸ್ಥರು, ವೈಜ್ಞಾನಿಕ ಮತ್ತು ಕೈಗಾರಿಕಾ ಸಂಶೋಧನಾ ಮಂಡಳಿ, ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ, ವಿವೋ ಇಂಡಿಯಾದ ಕಾರ್ಪೊರೇಟ್ ಸ್ಟ್ರಾಟಜಿ ಮುಖ್ಯಸ್ಥರಾದ ಗೀತಾಜ್ ಚನ್ನಣ್ಣ, ಇಂದು ಕುಮಾರ್, ಮುಖ್ಯಸ್ಥರು, ICT ಮತ್ತು ತರಬೇತಿ ವಿಭಾಗ, CIET – NCERT ,ಐಹಬ್ ದಿವ್ಯಸಂಪರ್ಕ್, ಐಐಟಿ ರೂರ್ಕಿಯ ಸಿಇಒ ಮನೀಶ್ ಆನಂದ್ ಅವರು ಅಭಿನಂದನೆ ಸಲ್ಲಿಸಿದ್ದಾರೆ.

ಅನುಷ್ ಅರುಣ್ ಕೆ. ಮತ್ತು ಎಂ.ವೃಂದಾ ಶೆಣೈ ನಿಟ್ಟೆಯ ಎನ್ಎಸ್ಎಎಂ ಇಂಗ್ಲಿಷ್ ಮೀಡಿಯಂ ನಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ.

 

Leave a Reply

Your email address will not be published. Required fields are marked *