Share this news

ಉಡುಪಿ: ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ವತಿಯಿಂದ ಅಂಗನವಾಡಿ ಕೇಂದ್ರಗಳಿಗೆ ಪೌಷ್ಟಿಕ ಆಹಾರ ಪೂರೈಸುವ ಮಹಿಳಾ ಸಹಕಾರಿ ಸಂಸ್ಥೆಯಲ್ಲಿ ಕೋಟ್ಯಾಂತರ ರೂಪಾಯಿ ಅವ್ಯವಹಾರವಾಗಿರುವ ವಿಚಾರ ಬೆಳಕಿಗೆ ಬಂದಿದ್ದು, ಇದೇ ಸಂಸ್ಥೆಯ ವ್ಯವಸ್ಥಾಪಕಿಯ ವಿರುದ್ಧ ಅವ್ಯವಹಾರದ ಆರೋಪ ಕೇಳಿಬಂದಿದೆ.
ಉಡುಪಿ ಜಿಲ್ಲೆಯ ಹಿರಿಯಡಕ ಎಂಬಲ್ಲಿ ಅಂಗನವಾಡಿ ಕೇಂದ್ರಗಳಿಗೆ ಆಹಾರ ಸರಬರಾಜು ಆಗುವ ಎಮ್. ಎಸ್.ಪಿ.ಸಿ ಯ ಪೌಷ್ಟಿಕ ಆಹಾರ ತಯಾರಿಕಾ ಘಟಕದಲ್ಲಿ ಪ್ರಧಾನ ಕಚೇರಿಯಲ್ಲಿ ಕೋಟ್ಯಾಂತರ ರೂ. ಗೋಲ್ ಮಾಲ್ ನಡೆದಿದೆ ಎಂದು, ಸಂಸ್ಥೆಯ ಲೆಕ್ಕ ಪರಿಶೋಧಕಿ ಭವ್ಯಾ ಶೆಟ್ಟಿ ಎಂಬಾಕೆಯ ವಿರುದ್ಧ ಸಂಸ್ಥೆಯ ಅಧ್ಯಕ್ಷರು ಮತ್ತು ಸದಸ್ಯರು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಗೆ ದೂರು ನೀಡಿದ್ದಾರೆ. ಅಂಗನವಾಡಿಗಳಿಗೆ ಪೂರೈಕೆಯಾಗುವ ಪೌಷ್ಟಿಕ ಆಹಾರ ಉತ್ಪಾದನಾ ಘಟಕ (ಎಮ್ ಎಸ್ ಪಿ ಸಿ) ಯಲ್ಲಿ ಲೆಕ್ಕ ಪರಿಶೋಧಕಿಯಾಗಿರುವ ಭವ್ಯ ಶೆಟ್ಟಿ ಸಂಘದ ಅಧ್ಯಕ್ಷ ಹಾಗೂ ಕಾರ್ಯದರ್ಶಿಯವರ ಸಹಿ ಪಡೆದು ಚೆಕ್ ಮೂಲಕ ಲಕ್ಷಾಂತರ ರೂಪಾಯಿ ಹಣವನ್ನು ಲಪಟಾಯಿಸಿದ್ದಾರೆ ಎಂದು ಆರೋಪಿಸಲಾಗಿದೆ. ಸಂಘದಲ್ಲಿ ಒಟ್ಟು 18 ಮಂದಿ ಸದಸ್ಯರಿದ್ದು, ಅವ್ಯವಹಾರ ಆರೋಪ ಎದುರಿಸುತ್ತಿರುವ ಭವ್ಯ ಶೆಟ್ಟಿ ಸಂಘದ ಅಧ್ಯಕ್ಷರು ಹಾಗೂ ಇತರ ಸದಸ್ಯರಿಗೆ ಬೆದರಿಕೆ ಹಾಕಿದ್ದಾಳೆ ಎಂದು ಸದಸ್ಯರು ಆರೋಪಿಸಿದ್ದಾರೆ.
ಈ ಅವ್ಯವಹಾರದ ಕುರಿತು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿ ಶ್ಯಾಮಲಾ ಅವರನ್ನು ಪ್ರಶ್ನಿಸಿದಾಗ ಸಂಸ್ಥೆಯಲ್ಲಿ ಅವ್ಯವಹಾರವಾಗಿ ಎನ್ನುವ ದೂರು ನಬಂದಿದೆ, ಈ ಪ್ರಕರಣದಲ್ಲಿ ಅವ್ಯವಹಾರದ ಕುರಿತು ಸೂಕ್ತ ತನಿಖೆ ನಡೆಸಿ, ತನಿಖೆ ಪೂರ್ಣಗೊಂಡ ಬಳಿಕ ಈ ಕುರಿತು ಮಾಹಿತಿ ನೀಡಲಾಗುವುದೆಂದರು.
ಸAಘದ ಹಣವನ್ನು ದುರುಪಯೋಗಪಡಿಸಿ ಅದನ್ನು ಸ್ವಂತಕ್ಕೆ ಬಳಿಸಿಕೊಂಡ ಭವ್ಯ ಶೆಟ್ಟಿಯನ್ನು ಕೆಲಸದಿಂದ ವಜಾಗೊಳಿಸಬೇಕು, ಮತ್ತು ಆಕೆ ಕೋಟ್ಯಾಂತರ ರೂಪಾಯಿ ಹಣ ಗೋಲ್ ಮಾಲ್ ಪ್ರಕರಣವನ್ನು ತನಿಖೆ ನಡೆಸಿ ಆಕೆಗೆ ಶಿಕ್ಷೆಯಾಗಬೇಕೆಂದು ಶಿಕ್ಷೆಯಾಬೇಕೆಂದು ಸಂಘದ ಸದಸ್ಯರು ಆಗ್ರಹಿಸಿದ್ದಾರೆ.

 

Leave a Reply

Your email address will not be published. Required fields are marked *