Share this news

ಹೆಬ್ರಿ: ತನ್ನ ಗಂಡ ಹಾಗೂ ಆತನ ಮನೆಯವರು ವರದಕ್ಷಿಣೆ ತರುವಂತೆ ಪೀಡಿಸಿ ಮಾನಸಿಕ ಹಾಗೂ ದೈಹಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಮಹಿಳೆಯೊಬ್ಬರು ಹೆಬ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಮುದ್ರಾಡಿ ಗ್ರಾಮದ ಶೃತಿ ಎಂಬವರಿಗೆ ಕಳೆದ 2020ರ ಡಿ.7ರಂದು ಸಂದೇಶ ಎಂಬವರ ಜತೆ ಮದುವೆ ಮಾಡಿಕೊಡಲಾಗಿತ್ತು. ಮದುವೆ ಸಂದರ್ಭದಲ್ಲಿ 5 ಲಕ್ಷ ನಗದು, ಕರಿಮಣಿ ಸರ, ಬಳೆ,ಚೈನ್,ಕಿವಿಯೋಲೆ, ಬ್ರಾಸ್ಲೆಟ್ ಹಾಗೂ ಉಂಗುರವನ್ನು ವರದಕ್ಷಿಣೆ ರೂಪದಲ್ಲಿ ನೀಡಿದ್ದರು. ಮದುವೆಯ ಬಳಿಕ ಗಂಡ ಸಂದೇಶ ಶೃತಿಯನ್ನು ಬೆಂಗಳೂರಿನ ಸ್ವಂತ ಮನೆಗೆ ಕರೆದುಕೊಂಡು ಹೋಗುವುದಾಗಿ ಹೇಳಿ ಗಂಡನ ಚಿಕ್ಕಮ್ಮನ ಮನೆಯಲ್ಲಿ ಬಿಟ್ಟುಹೋಗಿದ್ದ ಎಂದು ಆರೋಪಿಸಲಾಗಿದೆ. ಮದುವೆಯಾದ ಬಳಿಕ ಗಂಡ ನಿತ್ಯ ಮದ್ಯ ಸೇವನೆ ಮಾಡಿಕೊಂಡು ಬಂದು ಪತ್ನಿ ಶೃತಿಗೆ ಕಿರುಕುಳ ನೀಡುತ್ತಿದ್ದ,ಈತನ ಈ ಕೃತ್ಯಕ್ಕೆ ನಾದಿನಿ ಸುಮಲತಾ, ಮಾವ ಕೃಷ್ಣಯ್ಯ, ಅತ್ತೆ ಸುಮತಿ, ಗಂಡನ ಚಿಕ್ಕಮ್ಮ ಬೇಬಿ ಹಾಗೂ ಅವರ ಮಗ ಆದರ್ಶ್ ಎಂಬವರು ಸೇರಿ ಕಿರುಕುಳ ನೀಡಿದ್ದಾರೆ ಎಂದು ಶೃತಿ ಆರೋಪಿಸಿದ್ದಾರೆ. ಇದಲ್ಲದೇ ಆಕೆ ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಆರೈಕೆ ಮಾಡದೇ ನೀನ ಉ ಹೆಚ್ಚುವರಿ ವರದಕ್ಷಿಣೆ ತಂದರೆ ಮಾತ್ರ ಮನೆಗೆ ಬಾ ಇಲ್ಲವಾದರೆ ಬರಬೇಡ ಎಂದು ಗಂಡ ಸಂದೇಶ ಬೆದರಿಕೆ ಹಾಕಿದ್ದ. ಇದಲ್ಲದೇ ಆಕೆಯಿಂದ ಪಡೆದ ಚಿನ್ನಾಭರಣಗಳನ್ನು ಬೆಳ್ವೆಯ ಸಹಕಾರಿ ಸಂಘದಲ್ಲಿ ಅಡವಿರಿಸಿದ್ದು ಅದರ ಬಡ್ಡಿಯನ್ನು ಕಟ್ಟದೇ, ಪತ್ನಿಯ ಹೆರಿಗೆ ವೆಚ್ಚವನ್ನು ಕೂಡ ಭರಿಸದೇ, ಆಕೆಯ ಹೆಸರಿನಲ್ಲಿ ಬೈಕ್ ಖರೀದಿಸಿ ಸಾಲ ಮರುಪಾವತಿಸದೇ ವಂಚನೆ ಎಸಗಿದ್ದಾರೆ ಎಂದು ಶೃತಿ ಹೆಬ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

 

Leave a Reply

Your email address will not be published. Required fields are marked *