Share this news

ಕಾರ್ಕಳ: ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿ ಲಕ್ಷಾಂತರ ರೂಪಾಯಿ ಗಳಿಸಬಹುದೆನ್ನುವ ಆಸೆ ಹುಟ್ಟಿಸಿದ ಸೈಬರ್ ವಂಚಕರು ನಕಲಿ ಡಿಮ್ಯಾಟ್ ಖಾತೆ ಸೃಷ್ಟಿಸಿ ಕಾರ್ಕಳದ ವ್ಯಕ್ತಿಯೋರ್ವರಿಗೆ 5 ಲಕ್ಷಕ್ಕೂ ಮಿಕ್ಕಿ ವಂಚಿಸಿದ ಪ್ರಕರಣ ಬೆಳಕಿಗೆ ಬಂದಿದೆ.
ಕಾರ್ಕಳ ತಾಲೂಕಿನ ನಲ್ಲೂರು ಗ್ರಾಮದ ಬೀರಾಲುಪೇಟೆ ನಿವಾಸಿ ಪವನ್ ಕುಮಾರ್ ಎಂಬವರು ವಂಚನೆಗೆ ಒಳಗಾಗದ ವ್ಯಕ್ತಿ. ಪವನ್ ಕುಮಾರ್ ಅವರ ಮೊಬೈಲ್ ನ ವಾಟ್ಸಾಪ್ ಗ್ರೂಪ್ ಗೆ ಅನಾಲಿಸಿಸ್ಟ್ ಟೆಕ್ನಿಕಲ್ ಗ್ರೂಪ್ ಎಂಬ ಶೇರು ಮಾರುಕಟ್ಟೆಯಲ್ಲಿ ಹೂಡಿಕೆ ಕುರಿತು ಸಂದೇಶ ಬಂದಿತ್ತು. ಶೇರು ವ್ಯವಹಾರದಲ್ಲಿ ಹಣ ತೊಡಗಿಸಿ ಲಕ್ಷಾಂತರ ರೂ ಆದಾಯ ಗಳಿಸಲು ಅವಕಾಶವಿದೆ ಎಂದು ಹೇಳಿದ ಹಿನ್ನಲೆಯಲ್ಲಿ ಪವನ್ ಕುಮಾರ್ ಟ್ರೇಡಿಂಗ್ ಇನ್ಸಿ÷್ಟಟ್ಯೂಶನಲ್ ಎಂಬ ಖಾತೆ ತೆರೆದು ಈ ಖಾತೆಗೆ ಫೆ 2 ರಿಂದ 14ರವರೆಗೆ ಎಚ್‌ಡಿಎಫ್‌ಸಿ ಹಾಗೂ ಎಕ್ಸಿಸ್ ಬ್ಯಾಂಕಿನಿAದ ಒಟ್ಟು 5.77 ಲಕ್ಷ ರೂ ವರ್ಗಾಯಿಸಿದ್ದರು. ಆದರೆ ವಂಚಕರು ತಮ್ಮ ಹೆಸರಿನಲ್ಲಿ ನಕಲಿ ಖಾತೆ ತೆರೆದು ಪವನ್ ಕುಮಾರ್ ಅವರಿಗೆ ಪಂಗನಾಮ ಹಾಕಿದ್ದಾರೆ.
ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

 

 

Leave a Reply

Your email address will not be published. Required fields are marked *