ಕಾರ್ಕಳ : ಎಣ್ಣೆಹೊಳೆ ಹಂಚಿಕಟ್ಟೆ ಮಹಾಮ್ಮಾಯಿ ದೇವಸ್ಥಾನದ ಬ್ರಹ್ಮಕಲಶೋತ್ಸವ ಮಹೋತ್ಸವವು ಫೆ21 ರಿಂದ ಸಡಗರದಿಂದ ನಡೆಯುತ್ತಿದ್ದು, ಫೆ 22 ರಂದು ವೇದಮೂರ್ತಿ ಜಾರ್ಕಳ ಪ್ರಸಾದ್ ತಂತ್ರಿ ಹಾಗೂ ದೇವಳದ ಪ್ರಧಾನ ಅರ್ಚಕ ವೇದಮೂರ್ತಿ ಅರುಣ್ ಭಟ್ ಅವರ ಪೌರೋಹಿತ್ಯದಲ್ಲಿ ವಿವಿಧ ಧಾರ್ಮಿಕ ವಿಧಿವಿಧಾನಗಳೊಂದಿಗೆ ನೆರವೇರಿತು.
ಈ ಸಂದರ್ಭದಲ್ಲಿ ಪ್ರಧಾನ ಹೋಮ, 108 ಕಲಶ ಸಹಿತ ಬ್ರಹ್ಮಕಲಾಧಿವಾಸ,ಮಧ್ಯಾಹ್ನ ಶುಭ ಲಗ್ನದಲ್ಲಿ ಮಹಾಮ್ಮಾಯಿ ದೇವಿಗೆ ಬ್ರಹ್ಮಕಲಶಾಭಿಷೇಕ, ಪ್ರಸನ್ನಪೂಜೆ,ಮಹಾಪೂಜೆ ಹಾಗೂ ಅನ್ನಸಂತರ್ಪಣೆ ನಡೆಯಿತು. ಇದೇವೇಳೆ ಆಡಳಿತ ಸಮಿತಿ ಅಧ್ಯಕ್ಷ ಅರುಣ್ ಭಟ್, ಜೀಣೋದ್ಧಾರ ಸಮಿತಿ ಅಧ್ಯಕ್ಷ ಸಾಧು ಟಿ. ಶೆಟ್ಟಿ,ಉತ್ಸವ ಸಮಿತಿ ಅಧ್ಯಕ್ಷ ಸುರೇಂದ್ರ ಶೆಟ್ಟಿ ಗೌರವಾಧ್ಯಕ್ಷ ರಾಜೇಂದ್ರ ಶೆಟ್ಟಿ, ರಾಮಕೃಷ್ಣ ವಾಗ್ಳೆ,ವಿಶ್ವನಾಥ ಶೆಟ್ಟಿ,ಕಾರ್ಯದರ್ಶಿ ಸಂತೋಷ್ ಜೈನ್,ಕಿಶೋರ್ ನಾಯ್ಕ್,ಸದಾನಂದ ನಾಯ್ಕ್, ದೇವಸ್ಥಾನದ ವ್ಯವಸ್ಥಾಪಕ ಶ್ಯಾಮ್ ನಾಯ್ಕ್, ಭಜನಾ ಮಂಡಳಿ ಅಧ್ಯಕ್ಷ ರಾಜೇಂದ್ರ, ಭಜನಾ ಮಂಡಳಿ ಸದಸ್ಯರು,ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು ಹಾಗೂ ಸದಸ್ಯರು, ಆಡಳಿತ ಸಮಿತಿ ಸದಸ್ಯರು ಹಾಗೂ ಸಾವಿರಾರು ಭಕ್ತಾದಿಗಳು ಪಾಲ್ಗೊಂಡು ದೇವಿ ದರ್ಶನ ಪಡೆದರು.