ಕಾರ್ಕಳ: ಮಲೆಕುಡಿಯ ಸಮುದಾಯದ ಕುಂದುಕೊರತೆ ಸಭೆಯ ಉಡುಪಿ ಜಿಲ್ಲಾಧಿಕಾರಿ ವಿದ್ಯಾ ಕುಮಾರಿ ಅಧ್ಯಕ್ಷತೆಯಲ್ಲಿ ಜಿಲ್ಲಾಧಿಕಾರಿಗಳ ಕೋರ್ಟ್ ಸಭಾಂಗಣದಲ್ಲಿ ಜರಗಿತು
ಜಿಲ್ಲಾ ಮಟ್ಟ ಮತ್ತು ತಾಲೂಕು ಮಟ್ಟದ ವಿವಿಧ ಇಲಾಖಾ ಮುಖ್ಯಸ್ಥರ ಉಪಸ್ಥಿತಿಯಲ್ಲಿ ಅಕ್ರಮ – ಸಕ್ರಮ, 94ಸಿ, ಅರಣ್ಯ ಹಕ್ಕುಪತ್ರ, ಪಡಿತರ ಚೀಟಿ, ಕುಡಿಯುವ ನೀರು, ಮನೆ ನಂಬ್ರ, ಗಂಗಾ ಕಲ್ಯಾಣ, ವೃದ್ಧಾಪ್ಯ ವೇತನ, ಪಿಎಮ್ ಕಿಸಾನ್, ಸ್ವ – ಉದ್ಯೋಗ, ವಿದ್ಯುತ್ ಸಂಪರ್ಕ, ರಸ್ತೆ, ಸೇತುವೆ ಮುಂತಾದ ಸಮುದಾಯದ ವಿವಿಧ ರೀತಿಯ ಅಹವಾಲುಗಳನ್ನು ಸಲ್ಲಿಸಲಾಯಿತು.ಮಲೆಕುಡಿಯ ಸಮುದಾಯದ ಆಶೋತ್ತರಗಳಿಗೆ ಸ್ಪಂದಿಸಿ ಪರಿಹಾರ ಒದಗಿಸುವಂತೆ ಜಿಲ್ಲಾಧಿಕಾರಿಗಳು ಅಧಿಕಾರಿಗಳಿಗೆ ಸೂಚಿಸಿದರು.
ಈ ಸಂದರ್ಭದಲ್ಲಿ ರಾಜ್ಯ ಮಲೆಕುಡಿಯ ಸಂಘದ ಅಧ್ಯಕ್ಷ ಶ್ರೀಧರ ಗೌಡ ಈದು, ಸಂಘಟನಾ ಕಾರ್ಯದರ್ಶಿ ನೋಣಯ್ಯ ಗೌಡ ರೆಂಜಾಳ, ಉಡುಪಿ ಜಿಲ್ಲಾ ಮಲೆಕುಡಿಯ ಸಂಘದ ಅಧ್ಯಕ್ಷರಾದ ಗಂಗಾಧರ ಗೌಡ, ಕೋಶಾಧಿಕಾರಿ ಸುಂದರಿ ಪೇರಡ್ಕ, ವಕ್ತಾರ ದಿನೇಶ್ ಗೌಡ, ಸಹ ವಕ್ತಾರೆ ಸುಜಾತ, ಆಹ್ವಾನಿತ ಸದಸ್ಯೆ ಜಯಂತಿ, ನಾನಾ ಗ್ರಾಮ ಸಮಿತಿಯ ಪದಾಧಿಕಾರಿಗಳು, ಅಜೀವ ಸದಸ್ಯರು ಹಾಗೂ ಸಮಾಜ ಬಾಂಧವರು ಉಪಸ್ಥಿತಿದ್ದರು.