ಕಾರ್ಕಳ : ಒಗ್ಗಟ್ಟು ಇದ್ದಲ್ಲಿ ಕೆಲಸವನ್ನು ಜೊತೆಗೆ ಸಾಧನೆಯನ್ನು ಮಾಡಲು ಸುಲಭವಾಗುತ್ತದೆ. ಸಣ್ಣ ಸಣ್ಣ ಜೀವಿಗಳಿಂದ ಸಾಕಷ್ಟು ಕಲಿಯಬೇಕಾಗಿದೆ. ಯುವಕ ಹಾಗೂ ಯುವತಿ ಮಂಡಳಿಗಳು ಯಾವುದೆ ಮತ ಬೇಧವಿಲ್ಲದೆ ನಾವೆಲ್ಲರೂ ಸಮಾನರು ಎಂದು ಸದಾ ದುಡಿದಾಗ ಸಂಘದ ಏಳಿಗೆ ಸಾಧ್ಯವಾಗುತ್ತದೆ. ಮಾನವ ಜೀವಿಗಳು ಒಟ್ಟಾಗಿ ದುಡಿದಾಗ ಮಹತ್ತರ ಸಾಧನೆಯನ್ನು ಮಾಡಲು ಸಾಧ್ಯ ಎಂದು ಬೆಳ್ಮಣ್ ಸಂತ ಜೋಸೆಫರ ಚರ್ಚ್ ಸಹಾಯಕ ಧರ್ಮಗುರು ಅರ್ನಲ್ಡ್ ಮಥಾಯಸ್ ಹೇಳಿದರು. ಅವರು ಭಾನುವಾರ ಗೋಳಿಕಟ್ಟೆ ರಂಗಮAದಿರದಲ್ಲಿ ಜರುಗಿದ ಶ್ರೀ ಗುರುದುರ್ಗಾ ಮಿತ್ರ ಮಂಡಳಿ ಹಾಗೂ ಶ್ರೀ ಗುರುದುರ್ಗಾ ಮಹಿಳಾ ಮಂಡಳಿಯ 14ನೇ ವಾರ್ಷಿಕೋತ್ಸವ ಸಮಾರಂಭವನ್ನು ಉದ್ಘಾಟಿಸಿ ಆಶಿರ್ವಚನ ನೀಡಿದರು.
ಮುಖ್ಯ ಅತಿಥಿಯಾಗಿ ಭಾಗವಹಿಸಿದ ಉದ್ಯಮಿ ಉದಯ್ ಕುಮಾರ್ ಶೆಟ್ಟಿ ಮುನಿಯಾಲು ಮಾತನಾಡಿ ಕರಾವಳಿ ಕರ್ನಾಟಕ ಭೂಲೋಕದ ಸ್ವರ್ಗ ಎಂದು ಹೇಳಬಹುದು. ಇಲ್ಲಿನ ಕಲೆ ಸಂಸ್ಕöÈತಿ ಯಾವ ದೇಶದ ಮೂಲೆಗೂ ಹೋದರೂ ಸಿಗುವುದಿಲ್ಲ. ಅತ್ಯಂತ ಶ್ರೀಮಂತ ನಾಡು ನಮ್ಮದು. ಮಕ್ಕಳಿಗೆ ಒಳ್ಳೆಯ ಸಂಸ್ಕöÈತಿಯನ್ನು ಕಲಿಸುವ ಜವಬ್ದಾರಿ ಪೋಷಕರ ಮೇಲಿದೆ. ಗುರುದುರ್ಗಾ ಮಿತ್ರ ಮಂಡಳಿಯಲ್ಲಿ ಸರ್ವ ಧರ್ಮಿಯರು ಜೊತೆಯಾಗಿ ದುಡಿಯುತ್ತಿದ್ದು ಇದು ಸೌಹಾರ್ದತೆಗೆ ಸಾಕ್ಷಿಯಾಗಿದೆ ಎಂದರು.
ಪತ್ರಕರ್ತ ವಾಲ್ಟರ್ ನಂದಳಿಕೆ ಮಾತನಾಡಿ ಸೌಹಾರ್ದತೆಗೆ ಸಾಕ್ಷಿಯಾದ ಊರು ನಂದಳಿಕೆ. ಇಲ್ಲಿ ಜಾತಿ ಮತ ಬೇಧವಿಲ್ಲದೆ ಜನ ಒಗ್ಗಟ್ಟಿನಿಂದ ದುಡಿಯುತ್ತಿದ್ದು ಇಲ್ಲಿನ ಒಗ್ಗಟ್ಟು ಇಡೀ ನಾಡಿಗೆ ಮಾದರಿಯಾಗಿದೆ. ಕಳೆದ 14 ವರ್ಷಗಳಿಂದ ಮಿತ್ರ ಮಂಡಳಿಯೂ ಸದಾ ಸಮಾಜಮುಖಿ ಚಿಂತನೆಯಲ್ಲಿ ಕರ್ತವ್ಯವನ್ನು ಮಾಡುತ್ತಿದ್ದು ಜನ ಮನ ಗೆದ್ದಿದೆ. ಇಲ್ಲಿ ಜನರ ಪ್ರೀತಿ ಒಗ್ಗಟ್ಟು ಇತರರಿಗೂ ಮಾದರಿಯಾಗಬೇಕಾಗಿದೆ ಎಂದರು.
ಈ ಸಂದರ್ಭದಲ್ಲಿ ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆಯನ್ನು ಮಾಡಿದ ಈಶ ಎಲ್ ಶೆಟ್ಟಿ ಯವರನ್ನು ಮಂಡಳಿಯ ವತಿಯಿಂದ ಸನ್ಮಾನಿಸಲಾಯಿತು. ಹಾಗೂ ಪೂರ್ವಾಧ್ಯಕ್ಷರನ್ನು ಮತ್ತು ಸಂಘದ ಏಳಿಗೆಗೆ ಶ್ರಮಿಸಿದವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಂದಳಿಕೆ ಚಾವಡಿ ಅರಮನೆ ಸುಹಾಸ್ ಹೆಗ್ಡೆ ವಹಿಸಿದ್ದು, ಮುಖ್ಯ ಅತಿಥಿಗಳಾಗಿ ಉದ್ಯಮಿ ಶೋಧನ್ ಕುಮಾರ್ ಶೆಟ್ಟಿ, ಉದ್ಯಮಿ ಗ್ರೆಗೋರಿ ಮಿನೇಜಸ್ ನಂದಳಿಕೆ, ಯುವ ಉದ್ಯಮಿ ಅರುಣ್ ಕುಮಾರ್ ನಿಟ್ಟೆ, ನಂದಳಿಕೆ ಗ್ರಾಮ ಪಂ ಉಪಾಧ್ಯಕ್ಷ ಪ್ರಸಾದ್ ಶೆಟ್ಟಿ ಕಾಡಿಕಂಬಳ, ಮಹಿಳಾ ಮಂಡಳಿ ಗೌರವಾಧ್ಯಕ್ಷೆ ಜೋಯ್ಸ್ ಟೆಲ್ಲಿಸ್, ಮಹಿಳಾ ಮಂಡಳಿ ಅಧ್ಯಕ್ಷೆ ರೇಶ್ಮಾ ಹರೀಶ್, ಕಾರ್ಯದರ್ಶಿ ಅಶ್ವಿನಿ ರಾಜೇಶ್ ಮತ್ತಿತರರು ಪಸ್ಥಿತರಿದ್ದರು.
ಮಿತ್ರ ಮಂಡಳಿ ಅಧ್ಯಕ್ಷ ಹರಿಪ್ರಸಾದ್ ನಂದಳಿಕೆ ಸ್ವಾಗತಿಸಿ, ಸುಭಾಷ್ ಕುಮಾರ್ ಪ್ರಾಸ್ತಾವಿಕ ಮಾತುಗಳನ್ನಾಡಿ, ಸತೀಶ್ ಹೊಸ್ಮಾರು ಕಾರ್ಯಕ್ರಮ ನಿರೂಪಿಸಿ, ದೀಕ್ಷಿತ್ ದೇವಾಡಿಗ ವಂದಿಸಿದರು.
ಗ್ರಾಮ ಲೆಕ್ಕಿಗರ ನೇಮಕಾತಿ 2024: ಕರ್ನಾಟಕ ಕಂದಾಯ ಇಲಾಖೆಯ ಮೂಲಕ 1000 ಗ್ರಾಮ ಲೆಕ್ಕಿಗರ (VA) ಖಾಲಿ ಹುದ್ದೆಗಳಿಗೆ ಈಗಲೇ ಅರ್ಜಿ ಸಲ್ಲಿಸಿ.