ಕಾರ್ಕಳ: ರಾಮ ಮಂದಿರ ಟ್ರಸ್ಟ್ ಅಜೆಕಾರು, ಲಯನ್ಸ್ ಕ್ಲಬ್ ಅಜೆಕಾರು, ಕರುಣಾಳು ಬಾ ಬೆಳಕೆ ಪ್ರತಿಷ್ಠಾನ, ಎ.ಬಿ.ಶೆಟ್ಟಿ ಮೆಮೋರಿಯಲ್ ಇನ್ಸ್ಟಿಟ್ಯೂಟ್ ಆಫ್ ಡೆಂಟಲ್ ಸೈನ್ಸ್ ದೇರಳಕಟ್ಟೆ ಹಾಗೂ ಅಂಚೆ ಇಲಾಖೆ ಪುತ್ತೂರು ವಿಭಾಗ ಇವರ ಸಂಯುಕ್ತ ಆಶ್ರಯದಲ್ಲಿ ಉಚಿತ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಶಿಬಿರವು ನಾಳೆ (ಮಾ.16ರಂದು) ಅಜೆಕಾರು ರಾಮ ಮಂದಿರದಲ್ಲಿ ಬೆಳಗ್ಗೆ 9ರಿಂದ ಸಂಜೆ 4 ಗಂಟೆಯವರೆಗೆ ನಡೆಯಲಿದೆ.
ಈ ಶಿಬಿರದಲ್ಲಿ ಜನ್ಮ ದಿನಾಂಕ ತಿದ್ದುಪಡಿಗಾಗಿ ಎಸೆಸ್ಸೆಲ್ಸಿ ಅಂಕಪಟ್ಟಿ, ಜನನ ಪ್ರಮಾಣ ಪತ್ರ, ಪಾಸ್ ಪೋರ್ಟ್ ಹಾಜರುಪಡಿಸಬೇಕು. ಆಧಾರ್ ಹೆಸರು ಬದಲಾವಣೆಗೆ ಪಾಸ್ ಪೋಟ್ ಸೈಜ್ ಫೋಟೋ, ಪಾನ್ ಕಾರ್ಡ್,ಎಸೆಸ್ಸೆಲ್ಸಿ ಅಂಕಪಟ್ಟಿ, ಪಡಿತರ ಗುರುತಿನ ಚೀಟಿ, ಮತದಾರರ ಗುರುತಿನ ಚೀಟಿ, ಜನನ ಪ್ರಮಾಣ ಪತ್ರ, ಹಾಗೂ ವಿಳಾಸ ಬದಲಾವಣೆಗೆ ಗ್ರಾಮ ಪಂಚಾಯಿತಿ ವಿಳಾಸ ದೃಢೀಕರಣ ಪತ್ರ, ಪಡಿತರ ಚೀಟಿ, ತಹಸೀಲ್ದಾರ್ ಅಥವಾ ಗೆಜೆಟೆಡ್ ಆಫಿಸರ್ ಸರ್ಟಿಫಿಕೇಟ್ ಕಡ್ಡಾಯವಾಗಿ ತರಬೇಕು. ಇದಲ್ಲದೇ ಹೊಸ ಆಧಾರ್ ನೋಂದಣಿಗಾಗಿ ಜನನ ಪ್ರಮಾಣ ಎಸೆಸ್ಸೆಲ್ಸಿ ಅಂಕಪಟ್ಟಿ, ವಾಸ್ತವ್ಯ ದೃಢೀಕರಣ ಪತ್ರ, ಹಾಗೂ ಆಧಾರ್ ಜೋಡಣೆಗೆ ಮೊಬೈಲ್ ನಂಬರ್ ತರಬೇಕು.
ಈ ಶಿಬಿರದಲ್ಲಿ ನಿಟ್ಟೆ ಗಜ್ರಿಯಾ ಆಸ್ಪತ್ರೆಯ ಸಹಯೋಗದಲ್ಲಿ ಉಚಿತ ಆರೋಗ್ಯ ತಪಾಸಣಾ ಹಾಗೂ ದಂತ ಚಿಕಿತ್ಸಾ ಶಿಬಿರ ನಡೆಯಲಿದ್ದು ಅಜೆಕಾರು ಹಾಗೂ ಸುತ್ತಮುತ್ತಲಿನ ನಾಗರಿಕರು ಈ ಶಿಬಿರದ ಸದುಪಯೋಗ ಪಡೆಯುವಂತೆ ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
ಗ್ರಾಮ ಲೆಕ್ಕಿಗರ ನೇಮಕಾತಿ 2024: ಕರ್ನಾಟಕ ಕಂದಾಯ ಇಲಾಖೆಯ ಮೂಲಕ 1000 ಗ್ರಾಮ ಲೆಕ್ಕಿಗರ (VA) ಖಾಲಿ ಹುದ್ದೆಗಳಿಗೆ ಈಗಲೇ ಅರ್ಜಿ ಸಲ್ಲಿಸಿ.