ಕಾರ್ಕಳ: ಕೆಂದ್ರ ಸರಕಾರದ ಎಂ ಎಸ್ ಎಂ ಇ ಹಾಗೂ ಸ್ಪೂರ್ತಿ ಯೋಜನೆಯಲ್ಲಿ ನಿಟ್ಟೆಯಲ್ಲಿ ಸ್ಥಾಪನೆಯಾದ ಹಲಸಿನ ಸಂಸ್ಕಾರಣಾ ಘಟಕವು ದೇಶದ ಮೊದಲ ಹಲಸು ಘಟಕವಾಗಿದೆ,ಈ ಮೂಲಕ ಭಾರತದ ಹಲಸು ಬೆಳೆ ಜಾಗತಿಕ ಮನ್ನಣೆ ನಡೆಯಲಿದೆ ಎಂದು
ಹೈದರಾಬಾದ್ ನ್ಯಾಷನಲ್ ಇನ್ಸ್ಟಿಟ್ಯೂಟ್ ಎಂ ಎಸ್ ಎಂ ಇ ಆಡಳಿತ ನಿರ್ದೇಶಕಿ ಡಾ.| ಗ್ಲೋರಿ ಸ್ವರೂಪ ಹೇಳಿದರು.
ಅವರು ನಿಟ್ಟೆ ಇಂಜಿನಿಯರಿಂಗ್ ಕಾಲೇಜು ಆವರಣದಲ್ಲಿ ಸದಾನಂದ ಸಭಾಂಗಣದಲ್ಲಿ ನಡೆದ ಕೇಂದ್ರ ಸರ್ಕಾರದ ಎಂ ಎಸ್ ಎಂ ಇ ಹಾಗೂ ಸ್ಪೂರ್ತಿ ಯೋಜನೆಯ ಸಹಯೋಗದೊಂದಿಗೆ ನಿಟ್ಟೆ ಹಲಸು ಕ್ಲಸ್ಟರ್ ವತಿಯಿಂದ ನಡೆದ ಎರಡು ದಿನಗಳ ಹಲಸು ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.
ದೇಶದಲ್ಲಿ ಸಣ್ಣ ಪ್ರಮಾಣದ ಕೈಗಾರಿಕೆಗಳು ಬೆಳೆದಾಗ ಉದ್ಯೋಗ ಸೃಷ್ಟಿಯ ಜತೆಗೆ ದೇಶದ ಆರ್ಥಿಕ ಪ್ರಗತಿ ಸಾಧ್ಯವಾಗಲಿದೆ ಎಂದರು.
ಪಂಜಾಬ್ ರಾಜ್ಯದಲ್ಲಿ ಅನೇಕ ಕ್ಲಸ್ಟರ್ ಅಭಿವೃದ್ಧಿ ಹೊಂದಿದ್ದು ಮಹಿಳೆಯರು ಕೂಡ ಪಾಲುದಾರರಾಗಿದ್ದಾರೆ. ರಾಜ್ಯದಲ್ಲಿ 6 ಸಾವಿರಕ್ಕೂ ಹೆಚ್ಚು ಉತ್ಪಾದನಾ ಘಟಕಗಳಿದ್ದು 10 ಸಾವಿರಕ್ಕೂ ಮಿಕ್ಕಿ ಉತ್ಪನ್ನಗಳು ಮಾರುಕಟ್ಟೆಗೆ ಬಿಡುಗಡೆಯಾಗುತ್ತಿವೆ ಎಂದರು.
ಕೊಡಗು ವಿಶ್ವವಿದ್ಯಾಲಯದ ಉಪಕುಲಪತಿ ಡಾ. ಅಶೋಕ್ ಆಲೂರು ಮಾತನಾಡಿ, ಹಲಸು ಬೆಳೆಗಾರರಿಗೆ ಉತ್ತಮ ಮೌಲ್ಯ ದೊರೆಯಲು ಸಾಧ್ಯವಿದೆ.ಹಲಸು ಉತ್ತಮ ಗುಣಮಟ್ಟದ ಬೆಳೆಯಾಗಿದ್ದು ದೇಶೀಯ ಮಟ್ಟದಲ್ಲಿ ಮಹತ್ವದ ಬೆಳೆಯಾಗಿದೆ. ದೇಶದ ಅನೇಕ ರಾಜ್ಯಗಳಲ್ಲಿ ಹಲಸನ್ನು ರಾಜ್ಯದ ಬೆಳೆಯಾಗಿ ಘೋಷಿಸಲಾಗಿದೆ ಎಂದರು.
ಎ ಐ ಸಿ ನಿಟ್ಟೆ ಕಾರ್ಯನಿರ್ವಾಹಕ ಅಧಿಕಾರಿ ಡಾ ಎ ಪಿ ಅಚಾರ್ ಪ್ರಾಸ್ತಾವಿಕ ಮಾತನಾಡಿ ಹಲಸಿನ ಹಣ್ಣು ಔಷಧೀಯ ಗುಣಗಳನ್ನು ಹೊಂದಿದ್ದು ಇಪ್ಪತ್ತಕ್ಕೂ ಹೆಚ್ಚು ಉತ್ಪನ್ನಗಳನ್ನು ತಯಾರಿಸಬಹುದಾಗಿದೆ.ಸ್ಥಳೀಯ ನಿರುದ್ಯೋಗಿ ಯುವಕ ಯುವತಿಯರಿಗೆ ಉದ್ಯೋಗ ನೀಡಲು ಅವಕಾಶ ಕಲ್ಪಿಸಿದೆ ಎಂದರು
ಈ ಸಂದರ್ಭದಲ್ಲಿ
ನಬಾರ್ಡ್ ಸಹಾಯಕ ನಿರ್ದೇಶಕ ಸಂಗೀತ ಎಸ್ ಕಾರ್ತ, ಕೆನರಾ ಬ್ಯಾಂಕ್ ನ ಸಹಾಯಕ ನಿರ್ದೇಶಕ ಕೆ. ಶ್ರೀಜಿತ್, ಸಿರಿ ಧರ್ಮಸ್ಥಳ ಆಡಳಿತ ನಿರ್ದೇಶಕ ಜನಾರ್ದನ, ನಿಟ್ಟೆ ಇಂಜಿನಿಯರಿಂಗ್ ಕಾಲೇಜ್ ಪ್ರಾಂಶುಪಾಲ ನಿರಂಜನ್ ಚಿಪ್ಲೂನ್ ಕರ್ , ಸುಫಲಾ ಫಾರ್ಮ್ ಅಧ್ಯಕ್ಷ ಎನ್ ಟಿ ಪೂಜಾರಿ, ಸುಫಲಾ ಫಾರ್ಮ್ ನಿರ್ದೇಶಕ ನವೀನ ನಾಯಕ್ , ಉಪಸ್ಥಿತರಿದ್ದರು.ಸಂಪಾದಕ ಶ್ರೀ ಪಡ್ರೆ , ಉಪಸ್ಥಿತರಿದ್ದರು.
ಗ್ರಾಮ ಲೆಕ್ಕಿಗರ ನೇಮಕಾತಿ 2024: ಕರ್ನಾಟಕ ಕಂದಾಯ ಇಲಾಖೆಯ ಮೂಲಕ 1000 ಗ್ರಾಮ ಲೆಕ್ಕಿಗರ (VA) ಖಾಲಿ ಹುದ್ದೆಗಳಿಗೆ ಈಗಲೇ ಅರ್ಜಿ ಸಲ್ಲಿಸಿ.