ನವದೆಹಲಿ : ಅಬಕಾರಿ ನೀತಿಗೆ ಸಂಬಂಧಿಸಿದ ಮನಿ ಲಾಂಡರಿಂಗ್ ಪ್ರಕರಣದಲ್ಲಿ ಬಂಧನಕ್ಕೆ ತಡೆ ನೀಡಲು ದೆಹಲಿ ಹೈಕೋರ್ಟ್ ನಿರಾಕರಿಸಿದ ಬೆನ್ನಲ್ಲೇ ಇಡಿ ಅಧಿಕಾರಿಗಳು ಅರವಿಂದ ಕೇಜ್ರಿವಾಲ್ ನಿವಾಸದ ಮೇಲೆ ದಾಳಿ ನಡೆಸಿ ಬಂಧಿಸಿದ್ದಾರೆ.
ಜ್ಯಾರಿ ನಿರ್ದೇಶನಾಲಯ (ED) ಅಧಿಕಾರಿಗಳ ತಂಡ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸಕ್ಕೆ ತಲುಪಿದ್ದರು. ಈ ಪ್ರಕರಣದಲ್ಲಿ ಅವರಿಗೆ ಸಮನ್ಸ್ ನೀಡಲು ತನಿಖಾ ಸಂಸ್ಥೆಯ ತಂಡವು ಕೇಜ್ರಿವಾಲ್ ಅವರ ನಿವಾಸಕ್ಕೆ ತೆರಳಿದ್ದರು. ಸಿಂ ನಿವಾಸ ಶೋಧಿಸಲು ವಾರಂಟ್ ಇದೆ ಎಂದು ಅಧಿಕಾರಿಗಳ ತಂಡವು ಮುಖ್ಯಮಂತ್ರಿ ನಿವಾಸದ ಸಿಬ್ಬಂದಿಗೆ ಮಾಹಿತಿ ನೀಡಿತ್ತು.
ಆಮ್ ಆದ್ಮಿ ಪಕ್ಷದ (ಎಎಪಿ) ಮುಖ್ಯಸ್ಥರು ಈ ಹಿಂದೆ ಈ ಪ್ರಕರಣದಲ್ಲಿ ಏಜೆನ್ಸಿಯ ಅನೇಕ ಸಮನ್ಸ್ ಗಳನ್ನು ತಪ್ಪಿಸಿಕೊಂಡಿದ್ದರು.
ನ್ಯಾಯಮೂರ್ತಿ ಸುರೇಶ್ ಕುಮಾರ್ ಕೈಟ್ ಮತ್ತು ಮನೋಜ್ ಜೈನ್ ಅವರನ್ನೊಳಗೊಂಡ ದೆಹಲಿ ಹೈಕೋರ್ಟ್ ಪೀಠವು ಕೇಜ್ರಿವಾಲ್ ಅವರಿಗೆ ಈ ಪ್ರಕರಣದಲ್ಲಿ ಬಲವಂತದ ಕ್ರಮದಿಂದ ಯಾವುದೇ ರಕ್ಷಣೆ ನೀಡಲು ನಿರಾಕರಿಸಿತು. ಸಮನ್ಸ್ ಪ್ರಶ್ನಿಸಿ ಎಎಪಿ ನಾಯಕನ ಮುಖ್ಯ ಅರ್ಜಿ ವಿಚಾರಣೆಗೆ ನಿಗದಿಯಾದಾಗ ಏಪ್ರಿಲ್ 22 ರಂದು ಹೆಚ್ಚಿನ ಪರಿಗಣನೆಗಾಗಿ ನ್ಯಾಯಪೀಠ ಅವರ ಅರ್ಜಿಯನ್ನು ಪಟ್ಟಿ ಮಾಡಿತು ಮತ್ತು ಪ್ರತಿಕ್ರಿಯೆಯನ್ನು ಸಲ್ಲಿಸುವಂತೆ ಜಾರಿ ನಿರ್ದೇಶನಾಲಕ್ಕೆ ಸೂಚಿಸಿದೆ.