ಕಾರ್ಕಳ: ಪೋಷಕರು ತಮ್ಮ ಮಗುವಿನ ಜತೆ ಯಕ್ಷಗಾನ ನೋಡುತ್ತಿದ್ದ ಸಂದರ್ಭದಲ್ಲಿ ವೇಗವಾಗಿ ಬಂದ ಸ್ಕೂಟರ್ ಸವಾರ ಮಗುವಿಗೆ ಡಿಕ್ಕಿ ಹೊಡೆಸಿ ಅಪಘಾತವೆಸಗಿ ಬಳಿಕ ಮಗುವಿನ ಚಿಕಿತ್ಸಾ ವೆಚ್ಚ ಭರಿಸುವುದಾಗಿ ಮಾತುಕತೆ ನಡೆಸಿ ನಂತರ ಮಗುವಿನ ಚಿಕಿತ್ಸಾ ವೆಚ್ಚನೀಡದೇ ಸತಾಯಿಸಿದ ಪ್ರಕರಣಕ್ಕೆ ಸಂಬAಧಿಸಿದAತೆ ಮಗುವಿನ ಪೋಷಕರು ಸ್ಕೂಟರ್ ಸವಾರಶರತ್ ಎಂಬಾತನ ವಿರುದ್ದ ಕಾರ್ಕಳ ನಗರ ಠಾಣೆಗೆ ದೂರು ನೀಡಿದ್ದಾರೆ.
ಕಾರ್ಕಳ ಕುಕ್ಕುಂದೂರು ಗ್ರಾಮದ ನಿವಾಸಿ ದೀಕ್ಷೀತಾ ತನ್ನ ಗಂಡ ಹಾಗೂ ತನ್ನ ಮಗ ರುತ್ವಿಕ್ ಜತೆ ಜ 3 ರಂದು ಕುಕ್ಕ್ಕುಂದೂರು ಗ್ರಾಮದ ಅಯ್ಯಪ್ಪನಗರದ ಅಯ್ಯಪ್ಪ ದೇವಸ್ಥಾನದ ಬಳಿ ಯಕ್ಷಗಾನ ಬಯಲಾಟ ವೀಕ್ಷೀಸುತ್ತಿರುವಾಗ ರಾತ್ರಿ 11:30 ರ ಸುಮಾರಿಗೆ ಸ್ಕೂಟರ್ ಸವಾರ ಶರತ್ ವೇಗವಾಗಿ ಬಂದು ರುತ್ವಿಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಕಾಲಿಗೆ ತೀವೃ ಗಾಯಗಳಾಗಿತ್ತು. ಈ ಘಟನೆಯ ಬಳಿಕ ಮಗುವಿನ ಚಿಕಿತ್ಸಾ ವೆಚ್ಚ ತಾನೇ ಭರಿಸುವುದಾಗಿ ಪೊಲೀಸ್ ಠಾಣೆಗೆ ದೂರು ನೀಡದಂತೆ ಮನವಿ ಮಾಡಿದ್ದ ಹಿನ್ನಲೆಯಲ್ಲಿ ಪೋಷಕರು ರುತ್ವಿಕ್ ಗೆ ಚಿಕಿತ್ಸೆ ನೀಡಿದ ಬಳಿಕ ಚಿಕಿತ್ಸಾ ವೆಚ್ಚ ಪಾವತಿಸುವಂತೆ ಶರತ್ ಬಳಿ ಕೇಳಿದಾಗ ಆತನ ಹಣ ನೀಡಲು ಸತಾಯಿಸಿದ ಹಿನ್ನಲೆಯಲ್ಲಿ ಆತನ ವಿರುದ್ಧ ದೂರು ದಾಖಲಾಗಿದೆ