ಕಾರ್ಕಳ: ನಿಟ್ಟೆ ಗ್ರಾಮದ ದೂಪದಕಟ್ಟೆ ಕುಕ್ಕಬೆ ಎಂಬಲ್ಲಿ ಕಾರು ಹಾಗೂ ಸ್ಕೂಟರ್ ಡಿಕ್ಕಿಯಾಗಿ ಸವಾರ ಹಾಗೂ ಸಹಸವಾರೆ ಗಾಯಗೊಂಡಿರುವ ಘಟನೆ ನಡೆದಿದೆ.
ಕಾರು ಚಾಲಕ ಗಾಡ್ವಿನ್ ಎಂಬವರು ತನ್ನ ಕಾರನ್ನು ಒಳರಸ್ತೆಯಿಂದ ವೇಗವಾಗಿ ಚಲಾಯಿಸಿಕೊಂಡುಬAದು ಏಕಾಎಕಿ ಮುಖ್ಯರಸ್ತೆಗೆ ಬಂದು ಕೌಡೊಟ್ಟು ರಸ್ತೆಗೆ ಏಕಾಎಕಿ ತಿರುಗಿಸಿದಾಗ ಕೌಡೊಟ್ಟು ರಸ್ತೆಯಿಂದ ಸ್ಕೂಟರಿನಲ್ಲಿ ಬರುತ್ತಿದ್ದ ಸವಾರ ಸಂಪತ್ ಹಾಗೂ ಅಶ್ವಿತಾ ಎಂಬವರಿಗೆ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಗಾಯಗೊಂಡು ಕಾರ್ಕಳದ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಬಳಿಕ ಹೆಚ್ಚಿನ ಚಿಕಿತ್ಸೆಗೆ ಅವರನ್ನು ಮಣಿಪಾಲದ ಕೆ.ಎಂ.ಸಿ ಆಸ್ಪತೆಗೆ ದಾಖಲಿಸಲಾಗಿದೆ.
ಈ ಕುರಿತು ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.