ಕಾರ್ಕಳ: ಬಸ್ಸಿನ ಟೈಮಿಂಗ್ಸ್ ವಿಚಾರದಲ್ಲಿ ಚಾಲಕರಿಬ್ಬರು ನಡುರಸ್ತೆಯಲ್ಲೇ ಪರಸ್ಪರ ಕಿತ್ತಾಡಿಕೊಂಡಿದ್ದಾರೆ.
ಸಾಣೂರು ಗ್ರಾಮದ ನಿವಾಸಿ ವಿಠಲ ರಾವ್ ಕಾರ್ಕಳ ಮಂಗಳೂರು ರೂಟಿನ ಬಸ್ ಚಾಲಕರಾಗಿದ್ದು, ಸೋಮವಾರ ಮಧ್ಯಾಹ್ನ ಕಾರ್ಕಳದಿಂದ ಮಂಗಳೂರಿಗೆ ಬಸ್ಸು ಚಲಾಯಿಸಿಕೊಂಡು ಕಾರ್ಕಳ ಪುಲ್ಕೇರಿ ಬಳಿ ತಲುಪಿದಾಗ ಹಿಂದಿನಿಂದ ಬಂದ ಪದ್ಮಾಂಬಿಕ ಬಸ್ ಚಾಲಕ ಮೋಹನ್ ಎಂಬವರು ತಾನು ಚಲಾಯಿಸುತ್ತಿದ್ದ ಬಸ್ಸನ್ನು ವಿಠಲ್ ಚಲಾಯಿಸುತ್ತಿದ್ದ ಬಸ್ಸಿಗೆ ಅಡ್ಡವಿರಿಸಿದ ವಿಠಲ್ ಅವರನ್ನು ಉದ್ದೇಶಿಸಿ ಅವಾಚ್ಯ ಪದಗಳಿಂದ ನಿಂದಿಸಿ ಜೀವ ಬೆದರಿಕೆಯೊಡ್ಡಿದ್ದಾರೆ ಅಲ್ಲದೇ ಬಸ್ಸಿಗೆ ಡಿಕ್ಕಿ ಹೊಡೆಸಿ ಜಖಂಗೊಳಿಸಿದ್ದಾರೆ ಎಂದು ವಿಠ್ಠಲ ರಾವ್ ನೀಡಿದ ದೂರಿನ ಮೇರೆಗೆ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.