ಕಾರ್ಕಳ : ವಿದ್ಯಾರ್ಥಿಗಳು ಹಾಗೂ ಇಂದಿನ ಯುವಕರು ಸಾಹಸಗಳನ್ನು ಶ್ರದ್ಧೆಯಿಂದ ಕಲಿತುಕೊಳ್ಳಬೇಕು. ಅವುಗಳು ಜನೋಪಯೋಗಿ ಮತ್ತು ಸಮಾಜ ಕೇಂದ್ರಿತವಾಗಿ ಸಶಕ್ತ ರಾಷ್ಟçವೊಂದರ ನಿರ್ಮಾಣಕ್ಕೆ ಪೂರಕವಾಗಬೇಕು. ಯುವಜನತೆ ದೇಶದ ಆಸ್ತಿ. ಪ್ರಕೃತಿ ಸಂರಕ್ಷಣೆ , ವಿಪತ್ತು ನಿರ್ವಹಣೆಗೆ ಕಟಿಬದ್ಧರಾಗಿ ದುಡಿಯಬೇಕೆಂದು ಭುವನೇಂದ್ರ ಕಾಲೇಜು ಪ್ರಾಂಶುಪಾಲ ಡಾ.ಮಂಜುನಾಥ ಎ. ಕೋಟ್ಯಾನ್ ಹೇಳಿದರು.
ಅವರು ಕಾರ್ಕಳ ಭುವನೇಂದ್ರ ಕಾಲೇಜಿನಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಶ್ರೀ ಭುವನೇಂದ್ರ ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ರೋವರ್ಸ್ ಮತ್ತು ರೇಂಜರ್ಸ್ ನ ರಾಜ್ಯಮಟ್ಟದ ನಾಲ್ಕು ಜಲಸಾಹಸ, ಪ್ರಕೃತಿ ಅಧ್ಯಯನ ಮತ್ತು ವಿಪತ್ತು ನಿರ್ವಹಣಾ ಶಿಬಿರವನ್ನು ಉದ್ಘಾಟಿಸಿ ಮಾತನಾಡಿದರು.
ಉಡುಪಿ ಜಿಲ್ಲಾ ಗೈಡ್ಸ್ ಆಯುಕ್ತ ಜ್ಯೋತಿ ಪೈಯವರು ಶುಭ ಹಾರೈಸಿದರು. ಆರ್ ಎಸ್ ಎಲ್ ಪ್ರತಿಮ್ ಕುಮಾರ್ ಶಿಬಿರದ ಮುನ್ನೋಟ ನೀಡಿದರು. ಕಾಲೇಜು ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ. ದತ್ತಾತ್ರೇಯ ಮಾರ್ಪಳ್ಳಿ, ಐಕ್ಯೂಎಸಿ ಸಂಯೋಜಕ ಎಚ್.ಜಿ ನಾಗಭೂಷಣ್, ಸ್ಥಳೀಯ ಸಂಸ್ಥೆ ಕಾರ್ಕಳದ ಉಪಾಧ್ಯಕ್ಷ ಜಗದೀಶ್ ಹೆಗ್ಡೆ, ರಾಜ್ಯ ಸಂಘಟನಾ ಆಯುಕ್ತೆ ಸುಮನಾ ಶೇಖರ್, ಆರ್ ಎಸ್ ಎಲ್ ಡಾ. ಪಿ. ಈಶ್ವರ್ ಭಟ್ ಅವರುಗಳು ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉಡುಪಿ ಜಿಲ್ಲಾ ಕಾರ್ಯದರ್ಶಿ ಬಿ ಆನಂದ ಅಡಿಗ ಸ್ವಾಗತಿಸಿ, ಆರ್‌ಎಲ್ ಸ್ವಾತಿ ಕೆ ಅವರು ವಂದಿಸಿದರು. ರೇಂಜರ್ ಕುಮಾರಿ ಶ್ವೇತಾ ಕಾರ್ಯಕ್ರಮ ನಿರೂಪಿಸಿದರು.