ಕಾರ್ಕಳ: ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆ, ಕಾರ್ಕಳ, ರೋಟರಿ ಕ್ಲಬ್ ಕಾರ್ಕಳ, ರೋಟರಿ ಕ್ಲಬ್ ಕಾರ್ಕಳ ರಾಕ್ ಸಿಟಿ , ಲಯನ್ಸ್ ಕ್ಲಬ್ ಕಾರ್ಕಳ, ಲಯನ್ಸ್ ಕ್ಲಬ್ ಕಾರ್ಕಳ ಸಿಟಿ, ಜೆಸಿಐ ಕಾರ್ಕಳ ಇವರ ಸಹಯೋಗದೊಂದಿಗೆ ವಿಶ್ವ ಆರೋಗ್ಯ ದಿನವನ್ನು ಡಾ. ಟಿ.ಎಂ.ಎ. ಪೈ ರೋಟರಿ ಆಸ್ಪತ್ರೆ ಕಾರ್ಕಳದಲ್ಲಿ ಆಚರಿಸಲಾಯಿತು.
ಈ ಪ್ರಯುಕ್ತ ಅರೋಗ್ಯ ಜಾಗೃತಿ ಶಿಕ್ಷಣವನ್ನು ಹಿರಿಯ ಮಕ್ಕಳ ತಜ್ಞೆ ಡಾ ಆಶಾ ಪಿ ಹೆಗ್ಡೆ ಅವರು ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, “ಪ್ರತ್ಯೇಕವಾಗಿ ಈ ಬೇಸಿಗೆಯಲ್ಲಿ ಪ್ರತಿಯೊಬ್ಬರು ತಮ್ಮ ಅರೋಗ್ಯದ ಬಗ್ಗೆ ಹೇಗೆ ಕಾಳಜಿ ವಹಿಸಬೇಕು, ಪೌಷ್ಟಿಕ ಆಹಾರ ಸೇವನೆ, ಸಾಕಷ್ಟು ನೀರನ್ನು ಸೇವಿಸುವುದು, ಮತ್ತು ಇತರ ಉಪಯುಕ್ತ ಅರೋಗ್ಯ ಜಾಗ್ರತಿ ಮಾಹಿತಿಯನ್ನು ನೀಡಿದರು. ಏ.7 ರಂದು ಜಗತ್ತಿನಾದ್ಯಂತ ವಿಶ್ವ ಅರೋಗ್ಯ ದಿನಾಚರಣೆಯನ್ನು ಆಚರಿಸಲಾಗುತ್ತದೆ. ಈ ವರ್ಷದ ಧ್ಯೆಯ ವಾಕ್ಯ “ನನ್ನ ಆರೋಗ್ಯ, ನನ್ನ ಹಕ್ಕು. “. ಎಲ್ಲರಿಗೂ ಉತ್ತಮ ಆರೋಗ್ಯ ನೀಡುವುದು ಮತ್ತು ಸಮುದಾಯ ಪಡೆದುಕೊಳ್ಳುವುದು ಪ್ರತಿಯೊಬ್ಬ ಪ್ರಜೆಯ ಜವಾಬ್ದಾರಿಯಾಗಿದೆ ಎಂದರು. ಕಾರ್ಯಕ್ರಮದಲ್ಲಿ ಹಿರಿಯ ರೋಟರಿ ಸದಸ್ಯರಾದ ರೋಟರಿಯನ್ ತುಕಾರಾಮ್ ನಾಯಕ್, ರೋಟರಿ, ಲಯನ್ಸ್, ಜೆಸಿಐ ಕ್ಲಬ್ ನ ಅಧ್ಯಕ್ಷರಾದ ರೋಟರಿಯನ್ ಸುರೇಶ್ ನಾಯಕ್, ಲಯನ್ ಜ್ಯೋತಿ, ಲಯನ್ ಸಚೀಂದ್ರ ಶೆಟ್ಟಿ, ಜೆಸಿ ಪ್ರಚಿತ್ ಕುಮಾರ್, ಹಿರಿಯ ನೇತ್ರ ತಜ್ಞ ಡಾ ಚಿದಾನಂದ ಕುಲಕರ್ಣಿ, ಆಸ್ಪತ್ರೆಯ ಸಿಬ್ಬಂದಿ ಮತ್ತಿತರು ಉಪಸ್ಥಿತರಿದ್ದರು.