Share this news

ಅಯೋಧ್ಯೆ: ರಾಮನವಮಿ ಹಿನ್ನೆಲೆಯಲ್ಲಿ ಬುಧವಾರ ಮುಂಜಾನೆ ೩:೩೦ ಕ್ಕೆ ಮಂಗಳಾರತಿಯೊಂದಿಗೆ ಪ್ರಾರಂಭವಾಗಿ ರಾತ್ರಿ ೧೧ ಗಂಟೆಗೆ ಕೊನೆಗೊಳ್ಳುವ ಅಯೋಧ್ಯೆಯ ರಾಮ ಮಂದಿರವು 19 ಗಂಟೆಗಳ ಕಾಲ ತೆರೆಯಲಿದೆ.

ರಾಮನವಮಿಯ ಆಚರಣೆಗಾಗಿ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿದ್ದು, ಏಪ್ರಿಲ್ ೧೬ ಮತ್ತು ೧೮ ರ ನಡುವೆ ರಾಮ್ ಲಲ್ಲಾ ದರ್ಶನ ಮತ್ತು ಆರತಿಗಾಗಿ ಎಲ್ಲಾ ವಿಶೇಷ ಪಾಸ್ ಬುಕಿಂಗ್ ಅನ್ನು ರದ್ದುಗೊಳಿಸಲಾಗಿದೆ. ರಾಮ ಮಂದಿರವನ್ನು ಪ್ರವೇಶಿಸುವ ಪ್ರತಿಯೊಬ್ಬರೂ ಸಾಮಾನ್ಯ ಭಕ್ತರಂತೆ ದೇವರ ದರ್ಶನ ಪಡೆಯಬೇಕೆಂದು ಟ್ರಸ್ಟ್ ಹೇಳಿದೆ.

ರಾಮನವಮಿಯ ದಿನದಂದು ಮುಂಜಾನೆ ೩:೩೦ ಕ್ಕೆ ಬ್ರಾಹ್ಮೀ ಮುಹೂರ್ತದಲ್ಲಿ ದೇವರಿಗೆ ಪೂಜೆ ಪ್ರಾರಂಭವಾಗಲಿದ್ದು, ಭಕ್ತರಿಗೆ ದರ್ಶನಕ್ಕಾಗಿ ಸರತಿ ಸಾಲಿನಲ್ಲಿ ನಿಲ್ಲಲು ವ್ಯವಸ್ಥೆ ಮಾಡಲಾಗುವುದು. ಭಕ್ತರಿಗೆ ರಾತ್ರಿ ೧೧ ಗಂಟೆಯವರೆಗೂ ರಾಮ್ ಲಲ್ಲಾ ದರ್ಶನಕ್ಕೆ ಅವಕಾಶ ಕಲ್ಪಿಸಲಾಗಿದೆ.

ದರ್ಶನದ ಸಮಯದಲ್ಲಿ ಅನಾನುಕೂಲತೆ ಮತ್ತು ಸಮಯ ವ್ಯರ್ಥವಾಗುವುದನ್ನು ತಪ್ಪಿಸಲು, ಭಕ್ತರು ತಮ್ಮ ಮೊಬೈಲ್ ಫೋನ್ಗಳು ಮತ್ತು ಇತರ ಬೆಲೆಬಾಳುವ ವಸ್ತುಗಳನ್ನು ತರದಂತೆ ಸೂಚಿಸಲಾಗಿದೆ.
ರಾಮ ಮಂದಿರದಲ್ಲಿ ನಡೆಯುವ ರಾಮ ನವಮಿ ಉತ್ಸವವನ್ನು ಪ್ರಸಾರ ಭಾರತಿ ದೂರದರ್ಶನದಲ್ಲಿ ನೇರ ಪ್ರಸಾರ ಮಾಡಲಿದೆ. ಇದಲ್ಲದೇ ರಾಮ ದೇವಾಲಯದಲ್ಲಿ ರಾಮ ನವಮಿ ಆಚರಣೆಯ ನೇರ ಪ್ರಸಾರಕ್ಕಾಗಿ ಅಯೋಧ್ಯೆ ಸ್ಥಳೀಯಾಡಳಿತವು ಅಯೋಧ್ಯೆಯಾದ್ಯಂತ ಸುಮಾರು ೧೦೦ ಎಲ್ಇಡಿ ಪರದೆಗಳನ್ನು ಅಳವಡಿಸಲಿದೆ ಎಂದು ಟ್ರಸ್ಟ್‌ ಪ್ರಕಟಣೆಯಲ್ಲಿ ತಿಳಿಸಿದೆ.

 

 

 

 

 

 

 

 

 

 

Leave a Reply

Your email address will not be published. Required fields are marked *