ಸಹರಾನ್ಪುರ :ಪ್ರತೀ ಬಾರಿ ಚುನಾವಣೆಗಳು ನಡೆದಾಗ ಕಾಂಗ್ರೆಸ್ ಮತಯಂತ್ರಗಳ ವಿಶ್ವಾಸಾರ್ಹತೆಯ ಕುರಿತು ನಿರಂತರ ಆರೋಪ ಮಾಡುತ್ತಲೇ ಬರುತ್ತಿತ್ತು. ಇದೀಗ ಮತ್ತೆ ಕಾಂಗ್ರೆಸ್ ಇದೇ ಆರೋಪ ಮಾಡಿದೆ.
ಉತ್ತರ ಪ್ರದೇಶದ ಸಹರಾನ್ಪುರದಲ್ಲಿ ಚುನಾವಣಾ ಪ್ರಚಾರ ನಡೆಸಿದ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ವಾದ್ರಾ,ಮತಯಂತ್ರಗಳನ್ನು ತಿರುಚದೇ ದೇಶವು ನ್ಯಾಯಸಮ್ಮತ ಚುನಾವಣೆ ನಡೆಸಿದರೆ, ಭಾರತೀಯ ಜನತಾ ಪಕ್ಷವು 180 ಕ್ಕಿಂತ ಹೆಚ್ಚು ಸ್ಥಾನಗಳನ್ನು ಪಡೆಯುವುದಿಲ್ಲ ಎಂದು ಆರೋಪಿಸಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, 400 ಕ್ಕೂ ಹೆಚ್ಚು ಸ್ಥಾನಗಳನ್ನು ಪಡೆಯುತ್ತೇವೆ ಎಂಬ ಬಿಜೆಪಿಯ ಹೇಳಿಕೆಯ ಆಧಾರವನ್ನು ಪ್ರಶ್ನಿಸಿದರು. “ಯಾವ ಆಧಾರದ ಮೇಲೆ ಅವರು 400 ಪಡೆಯುತ್ತಾರೆ ಎಂದು ಹೇಳುತ್ತಿದ್ದಾರೆ, ಅವರು 400 ಸ್ಥಾನಗಳನ್ನು ಪಡೆಯುತ್ತಾರೆ ಎಂದು ಹೇಗೆ ಹೇಳಲು ಸಾಧ್ಯ. ಇಂದು ಈ ದೇಶದಲ್ಲಿ, ಚುನಾವಣೆಗಳನ್ನು ಈ ರೀತಿಯಲ್ಲಿ ನಡೆಸಿದರೆ ಇವಿಎಂಗಳನ್ನು ಟ್ಯಾಂಪರ್ ಮಾಡದಿದ್ದಲ್ಲಿ ಬಿಜೆಪಿ 180 ಕ್ಕಿಂತ ಹೆಚ್ಚು ಸ್ಥಾನಗಳನ್ನು ಪಡೆಯಲು ಸಾಧ್ಯವೇ ಇಲ್ಲ ಎಂದು ಹೇಳಿದರು.
ಆದರೆ ಚುನಾವಣಾ ಆಯೋಗವು ಈ ಆರೋಪವನ್ನು ಸ್ಪಷ್ಟವಾಗಿ ತಳ್ಳಿ ಹಾಕಿತ್ತು.