ಹೆಬ್ರಿ:ಮನೆಯ ಬೀಗ ಒಡೆದು ಸುಮಾರು 6 ಲಕ್ಷ ಮೌಲ್ಯದ ಚಿನ್ನಾಭರಣ ಕಳವುಗೈದು ಪರಾರಿಯಾಗಿರುವ ಘಟನೆ ಮುದ್ರಾಡಿಯ ಕೆಲಕಿಲ ಎಂಬಲ್ಲಿ ನಡೆದಿದೆ.
ಮುದ್ರಾಡಿ ಗ್ರಾಮದ ಪ್ರಣೀತ್ ಎಂಬವರ ಮನೆಯಲ್ಲಿ ಕಳ್ಳತನ ನಡೆದಿದ್ದು ,ಈ ಕುರಿತು ಹೆಬ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪ್ರಣೀತ್ ಏ 18 ರಂದು ಮನೆಗೆ ಬೀಗ ಹಾಕಿ ಕಾರ್ಯಕ್ರಮದ ನಿಮಿತ್ತ ತನ್ನ ಪತ್ನಿಯ ಅಜ್ಜಿ ಮನೆಯಾದ ಬೈಲೂರಿಗೆ ತೆರಳಿದ್ದರು.ಬಳಿಕ ಶನಿವಾರ ಬೆಳಗ್ಗೆ ವಾಪಸು ಬಂದು ನೋಡಿದಾಗ ಮನೆಯ ಬಾಗಿಲು ಮುರಿದಿದ್ದು ಒಳಗೆ ಹೋಗಿ ನೋಡಿದಾಗ ಕಪಾಟಿನಲ್ಲಿ ಇರಿಸಲಾಗಿದ್ದ ಚಿನ್ನದ ನೆಕ್ಲಸ್ (25 ಗ್ರಾಂ), 01 ಜತೆ ಬಳೆ (25 ಗ್ರಾಂ), ಚೈನ್ -09 (20 ಗ್ರಾಂ), ಕಿವಿಯ ಬೆಂಡೊಲೆ 02 ಜತೆ (20 ಗ್ರಾಂ) ,ಕಿವಿಯ ಹ್ಯಾಂಗಿಗ್ ಚೈನ್ -04 ( 3 ಗ್ರಾಂ) ಮಕ್ಕಳ ಚಿಕ್ಕ ಉಂಗುರ -03 (05 ಗ್ರಾಂ), ಚಿಕ್ಕ ಕರಿಮಣಿ ಸರ-01 (08 ಗ್ರಾಂ), 500 ಗ್ರಾಂ ಬೆಳ್ಳಿ ಹಾಗೂ 15,000 ನಗದು ಸೇರಿ ಒಟ್ಟು 6 ಲಕ್ಷ ರೂಪಾಯಿ ಮೌಲ್ಯದ ಬಂಗಾರದ ಮತ್ತು ಬೆಳ್ಳಿಯ ಸ್ವತ್ತುಗಳನ್ನು ಕಳ್ಳರು ಕಳವು ಮಾಡಿರುವುದು ಬೆಳಕಿಗೆ ಬಂದಿದೆ.
ಈ ಕುರಿತು ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ