Share this news

ಕಾರ್ಕಳ :ಸದೃಢ ಹಾಗೂ ಬಲಿಷ್ಟ ಭಾರತ‌ ನಿರ್ಮಾಣ,ದೇಶದ ಹಾಗೂ ಮಹಿಳೆಯರ ಸುರಕ್ಷತೆಗಾಗಿ ನರೇಂದ್ರ ಮೋದಿಯವರ ಸರ್ಕಾರವನ್ನು ಬೆಂಬಲಿಸಬೇಕಿದೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುನಿಲ್ ಕುಮಾರ್ ಹೇಳಿದರು.
ಅವರು ಎ 23 ರಂದು ಮಂಗಳವಾರ ಕಾರ್ಕಳ ಮಂಜುನಾಥ ಪೈ ಸಭಾಂಗಣದಲ್ಲಿ ತಾಲೂಕು ಬಿಜೆಪಿ ಮಹಿಳಾ ಮೋರ್ಚಾ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿ, ಜನತೆಗೆ ಉಚಿತವಾಗಿ ನೀಡುತ್ತಿದ್ದ ಕೇಂದ್ರ ಸರ್ಕಾರದ ಯೋಜನೆಗಳನ್ನು ರದ್ದುಪಡಿಸಿ ಮಹಿಳೆಯರಿಗೆ 2 ಸಾವಿರ ರೂ. ಇನ್ನೊಂದು ಕೈಯಲ್ಲಿ ಕಿತ್ತುಕೊಂಡಿದೆ. ಬದುಕಿಗೆ ರಕ್ಷಣೆ ನೀಡುವ ಮೋದಿ ಗ್ಯಾರಂಟಿ ದೇಶಕ್ಕೆ ಅಗತ್ಯವಿದ್ದು, ಮತ ಯಾಚನೆ ತೆರಳುವ ಮಹಿಳಾ ಬಿಜೆಪಿ ಕಾರ್ಯಕರ್ತರು ಪ್ರತೀ ಮನೆಗೆ ತೆರಳಿ ಮಹಿಳೆಯರ ಭದ್ರತೆ, ರಕ್ಷಣೆ ಬಗ್ಗೆ ಅವರ ಮನವೊಲಿಸಿ ತಿಳಿಹೇಳುವ ಕೆಲಸ ಮಾಡಬೇಕು ಎಂದು ಶಾಸಕ ವಿ. ಸುನಿಲ್ ಕುಮಾರ್ ಕರೆ ನೀಡಿದರು.
ಕೊರೊನಾ ಸಂದರ್ಭ ಉಚಿತ ಲಸಿಕೆಯಿಂದ ಕೋಟ್ಯಾಂತರ ಮಂದಿಯ ಜೀವಕ್ಕೆ ರಕ್ಷಣೆ ಸಿಕ್ಕಿದೆ. ಕಾಂಗ್ರೆಸ್ ಸರಕಾರದಲ್ಲಿ ಹೆಣ್ಣುಮಕ್ಕಳಿಗೆ, ಮಹಿಳೆಯರಿಗೆ ರಕ್ಷಣೆಯಿಲ್ಲ ಎಂದರು.
ತಾಲೂಕು ಮಹಿಳಾ ಮೋರ್ಚಾದ ಅಧ್ಯಕ್ಷೆ ವಿನಯ ಡಿ.ಬಂಗೇರ ಅಧ್ಯಕ್ಷತೆ ವಹಿಸಿದ್ದರು. ಚುನಾವಣಾ ಉಸ್ತುವಾರಿ ಶ್ಯಾಮಲಾ ಕುಂದರ್, ಜಿಲ್ಲಾ ಮಹಿಳಾ ಮೋರ್ಚಾ ಅಧ್ಯಕ್ಷೆ ಸಂಧ್ಯಾ ರಮೇಶ್, ಬಿಜೆಪಿಯ ಮಹೇಶ್ ಕುಡುಪುಲಾಜೆ ಮಾತನಾಡಿದರು. ಬಿಜೆಪಿ ಮಂಡಲ ಅಧ್ಯಕ್ಷ ನವೀನ್ ನಾಯಕ್,ಮಂಡಲ ಕಾರ್ಯದರ್ಶಿ ರೇಷ್ಮಾ ಉದಯ್ ಶೆಟ್ಟಿ ಮೋರ್ಚಾದ ಸುಗಂಧಿ ನಾಯಕ್, ಕವಿತಾ ಹರೀಶ್, ವಿನುತಾ ಆಚಾರ್ಯ, ಹಿರಿಯ ಕರ‍್ಯಕರ್ತೆ ಭಾಗಿರಥಿ ರೆಂಜಾಳ ವೇದಿಕೆಯಲ್ಲಿದ್ದರು. ಜಿಲ್ಲಾ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಮಾಲಿನಿ ಜೆ.ಶೆಟ್ಟಿ ಸ್ವಾಗತಿಸಿ, ಪ್ರಸ್ತಾವನೆಗೈದರು. ವಿನುತಾ ವಂದಿಸಿ, ಸುಮಾ ರವಿಕಾಂತ್ ನಿರೂಪಿಸಿದರು

 

 

 

 

 

 

 

 

 

Leave a Reply

Your email address will not be published. Required fields are marked *