ಕಾರ್ಕಳ:ಉಡುಪಿ-ಚಿಕ್ಕಮಗಳೂರು ಕ್ಷೇತ್ರಕ್ಕೆ ಇಂದು ನಡೆದ ಲೋಕಸಭಾ ಚುನಾವಣೆಯಲ್ಲಿ ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ ಇಂದು ಶೇ 79.69 ಮತದಾನವಾಗಿದೆ.
ಕಾರ್ಕಳ ವಿಧಾನಸಭಾ ಕ್ಷೇತ್ರದಲ್ಲಿ 193512 ಮತದಾರರಿದ್ದು ಈ ಪೈಕಿ 154216 ಮತ ಚಲಾವಣೆಯಾಗಿದೆ. ಇದರಲ್ಲಿ 73,385 ಪುರುಷರು ಹಾಗೂ 80,831 ಮಹಿಳೆಯರು ತಮ್ಮ ಹಕ್ಕು ಚಲಾಯಿಸಿದ್ದಾರೆ.
ಇನ್ನು ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಶೇ 72.69 ಮತದಾನವಾಗಿದೆ.
ಹಲವೆಡೆ ಮತದಾರರ ಪಟ್ಟಿಯಲ್ಲಿ ಗೊಂದಲ, ಹೆಸರು ಬಿಟ್ಟುಹೋಗಿ ಮತದಾರರು ಪರದಾಡಿದರೆ,ಉಳಿದಂತೆ ಬಹುತೇಕ ಮತದಾನ ಶಾಂತಿಯುತವಾಗಿತ್ತು