ಹೆಬ್ರಿ: ತಂದೆಯ ಆಸ್ತಿಯ ವಿಚಾರದಲ್ಲಿ ಸಹೋದರರ ನಡುವಿನ ತಕರಾರಿನಲ್ಲಿ ತಮ್ಮಂದಿರು ತನ್ನ ಅಣ್ಣನ ಮೇಲೆ ತಲವಾರು ಹಾಗೂ ಮರದ ದೊಣ್ಣೆಯಿಂದ ಹಲ್ಲೆ ನಡೆಸಿದ್ದಾರೆ.
ಹೆಬ್ರಿ ತಾಲೂಕಿನ ಕುಚ್ಚೂರು ಗ್ರಾಮದಲ್ಲಿ ಏ.,22 ರಂದು ಈ ಘಟನೆ ನಡೆದಿದ್ದು,ತಡವಾಗಿ ಪ್ರಕರಣ ದಾಖಲಾಗಿದೆ.
ಕುಚ್ಚೂರು ಗ್ರಾಮದ ತಮ್ಮಯ್ಯ ಎಂಬವರು ತನ್ನ ಸಹೋದರರಿಂದ ಹಲ್ಲೆಗೊಳಗಾದ ವ್ಯಕ್ತಿ. ತಮ್ಮಯ್ಯ ತನ್ನ ತಂದೆ ತಿಮ್ಮಪ್ಪ ಅವರ ಜಾಗದ ಪಾಲಿನ ವಿಚಾರದಲ್ಲಿ ಮಾತುಕತೆ ನಡೆಲು ಮನೆಗೆ ತೆರಳಿದ್ದರು. ಏ. 22 ರಂದು ಮಾತುಕತೆ ನಡೆಸಿ ಸಂಜೆ 04 ಗಂಟೆಗೆ ಮನೆಯಿಂದ ಹೊರಗೆ ಬರುವಾಗ ತಮ್ಮಯ್ಯ ಅವರು ತಮ್ಮ ರಾಘವೇಂದ್ರ ಅವಾಚ್ಯ ಶಬ್ದಗಳಿಂದ ಬೈದು ತಲವಾರನಿಂದ ಹೊಡೆಯಲು ಬಂದಾಗ ತಮ್ಮಯ್ಯರವರ ಎಡಕೈ ಗೆ ತಲವಾರು ತಾಗಿ ಗಾಯವಾಗಿದೆ.ಇದಾದನಂತರ ಎಡಕಾಲಿಗೆ ತಲವಾರನಿಂದ ಹಲ್ಲೆ ನಡೆಸಿದ ಪರಿಣಾಮ ತಮ್ಮಯ್ಯ ನೆಲಕ್ಕೆ ಬಿದ್ದಾಗ ಇನ್ನಿಬ್ಬರು ತಮ್ಮಂದಿರಾದ ಸದಾನಂದ ಮತ್ತು ಸಂದೀಪ ರವರು ಅವಾಚ್ಯ ಶಬ್ದಗಳಿಂದ ಬೈದು ಇಬ್ಬರು ಮರದ ದೊಣ್ಣೆಯಿಂದ ಎಡಕಾಲಿಗೆ, ಬಲಕಾಲಿನ ತೊಡೆಗೆ , ಕುತ್ತಿಗೆಯ ಮೇಲ್ಭಾಗಕ್ಕೆ ಹೊಡೆದು ಕಾಲಿನಿಂದ ತುಳಿದು ಹಲ್ಲೆ ನಡೆಸಿದ್ದಾರೆ ಎಂದು ತಮ್ಮಯ್ಯ ಹೆಬ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು,ಈ ಕುರಿತು ಪ್ರಕರಣ ದಾಖಲಾಗಿದೆ