Share this news

ಕಾರ್ಕಳ: ಬೈಲೂರು ಸಮೀಪದ ಉಮಿಕಲ್ ಬೆಟ್ಟದಲ್ಲಿ ಭಾನುವಾರ ಮಧ್ಯಾಹ್ನ ಏಕಾಎಕಿ ಬೆಂಕಿ ಕಾಣಿಸಿಕೊಂಡ ಪರಿಣಾಮ ಬೆಟ್ಟದ ಒಂದು ಪಾರ್ಶ್ವದಲ್ಲಿ ಬೆಂಕಿ ತೀವೃಗತಿಯಲ್ಲಿ ವ್ಯಾಪಿಸಿದೆ.
ಬೆಟ್ಟದಲ್ಲಿ ಹೇರಳವಾಗಿ ಒಣಗಿದ ಹುಲ್ಲು ಹರಡಿದ್ದರಿಂದ ಬೆಂಕಿ ಗಾಳಿಯ ರಭಸಕ್ಕೆ ವೇಗವಾಗಿ ಹಬ್ಬಿದೆ. ಬೆಂಕಿ ಆಕಸ್ಮಿಕ ವಿಚಾರ ತಿಳಿಯುತ್ತಿದ್ದಂತೆಯೇ ಸ್ಥಳೀಯರು ಬೆಂಕಿ ನಂದಿಸಲು ಯತ್ನಿಸಿ,ಬಳಿಕ ಅಗ್ನಿ ಶಾಮಕ ದಳಕ್ಕೆ ಮಾಹಿತಿ ನೀಡಿದ್ದಾರೆ. ತಕ್ಷಣವೇ ಕಾರ್ಕಳ ಅಗ್ನಿಶಾಮಕ ದಳದ ಸಿಬ್ಬಂದಿಗಳು ಸ್ಥಳಕ್ಕಾಗಮಿಸಿದ್ದಾರೆ.ಆದರೆ ಬೆಂಕಿ ವ್ಯಾಪಿಸಿದ ಕಡೆಗೆ ಅಗ್ನಿಶಾಮಕ ದಳದ ವಾಹ‌ನ ತೆರಳಲು ಸಾಧ್ಯವಾಗದ ಹಿನ್ನಲೆಯಲ್ಲಿ ಬೆಂಕಿ ನಿಯಂತ್ರಿಸುವ ಕಾರ್ಯ ಸಾಧ್ಯವಾಗಿಲ್ಲ. ಕೊನೆಗೂ ಸಂಜೆ‌ವೇಳೆಗೆ ಬೆಂಕಿ ನಿಯಂತ್ರಣಕ್ಕೆ ಬಂದಿದೆ

 

 

 

 

                        

                          

Leave a Reply

Your email address will not be published. Required fields are marked *