ಕಾರ್ಕಳ: ಇತಿಹಾಸ ಪ್ರಸಿದ್ಧ ಆಲಡೆಗಳಲ್ಲಿ ಒಂದಾಗಿರುವ ಕಣಂಜಾರು ಬ್ರಹ್ಮಲಿಂಗೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಪ್ರಯುಕ್ತ ಬ್ರಹ್ಮಕಲಶೋತ್ಸವ ಅತ್ಯಂತ ಶ್ರದ್ಧೆ ಹಾಗೂ ಭಕ್ತಿಪೂರ್ವಕವಾಗಿ ಜರುಗುತ್ತಿದ್ದು, ಈ ಪ್ರಯುಕ್ತ ಭಾನುವಾರ ಶ್ರೀ ದೇವರ ಅದ್ದೂರಿ ರಥೋತ್ಸವ ನಡೆಯಿತು. ಮಧ್ಯಾಹ್ನ ರಥಾರೋಹಣ ನಂತರ ಉತ್ಸವ ಬಲಿ, ಮಹಾ ಪೂಜೆ ಅನ್ನ ಸಂತರ್ಪಣೆ ಜರುಗಿತು.
ಸಾಯಂಕಾಲ ರಥೋತ್ಸವ ಉತ್ಸವ ಬಲಿ,ಕವಾಟ ಬಂಧನ ಸೇರಿದಂತೆ ಧಾರ್ಮಿಕ ವಿಧಿ ವಿಧಾನಗಳು ಜರುಗಿದವು
ಬ್ರಹ್ಮಕಲಶೋತ್ಸವದ ಅಂಗವಾಗಿ ನವ ಚಂಡಿಕಾ ಯಾಗ
ಬ್ರಹ್ಮಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಪ್ರಯುಕ್ತ ಭಾನುವಾರ ಮಹಾರುದ್ರಯಾ, ನವ ಚಂಡಿಕಾ ಯಾಗ, ಸುವಾಸಿನೀ ಆರಾಧನೆ, ಮಧ್ಯಾಹ್ನ ಪೂಜೆ, ರಥಾರೋಹಣ, ಅನ್ನಸಂತರ್ಪಣೆ, ಶ್ರೀ ಮನ್ಮಹಾರಥೋತ್ಸವ ನಡೆಯಿತು.
ರಾತ್ರಿ ರಥೋತ್ಸವ ,ಉತ್ಸವ ಬಲಿ,ಓಲಗ ಮಂಟಪ ಪೂಜೆ, ಅಷ್ಟಾವಧಾನ ಸೇವೆ, ಭೂತಬಲಿ, ಕವಾಟ ಬಂಧನ ಮುಂತಾದ ಧಾರ್ಮಿಕ ವಿಧಿವಿಧಾನಗಳು ಜರುಗಿತು.
ಕ್ಷೇತ್ರದ ತಂತ್ರಿಗಳಾದ ಬ್ರಹ್ಮಶ್ರೀ ಷಡಂಗ ಬಿ. ಲಕ್ಷ್ಮೀನಾರಾಯಣ ತಂತ್ರಿ ಹಾಗೂ ಬ್ರಹ್ಮಶ್ರೀ ಷಡಂಗ ಬಿ. ಗುರುರಾಜ ತಂತ್ರಿಗಳ ಪೌರೋಹಿತ್ಯದಲ್ಲಿ ಪ್ರಧಾನ ಅರ್ಚಕ ಗುರುರಾಜ್ ಮಂಜಿತ್ತಾಯ ಧಾರ್ಮಿಕ ಕಾರ್ಯ ನೆರವೇರಿಸಿದರು. ಜೀರ್ಣೋದ್ಧಾರ ಮತ್ತು ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ವಿಕ್ರಮ್ ಹೆಗ್ಡೆ, ಆಡಳಿತ ಮೊಕ್ತೇಸರ ಸುಧೀರ್ ಹೆಗ್ಡೆ, ಪ್ರಧಾನ ಅರ್ಚಕ ಗುರುರಾಜ ಮಂಜಿತ್ತಾಯ, ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್ ಹೆಗ್ಡೆ, ಕೋಶಾಧಿಕಾರಿ ಮೀನಾ ಲಕ್ಷಣಿ ಅಡ್ಯಂತಾಯ, ಜೀರ್ಣೋದ್ಧಾರ ಸಮಿತಿ ಪದಾಧಿಕಾರಿಗಳು, ಸದಸ್ಯರು, ಆಡಳಿತ ಮಂಡಳಿ ಸದಸ್ಯರು ಹಾಗೂ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು.
ಇಂದು ತುಲಾಭಾರ,ಅವಭೃತ:
ಸೋಮವಾರ ಮುಂಜಾನೆ 8 ಗಂಟೆಗೆ ಕವಾಟೋದ್ಘಾಟನೆ ತುಲಾಭಾರ, ಮಧ್ಯಾಹ್ನ ಪೂಜೆ, ಅನ್ನಸಂತರ್ಪಣೆ, ನಿತ್ಯಬಲಿ ನಡೆಯಿತು.
ಸಂಜೆ ದೇವರಿಗೆ ಒಕುಳಿ, ತದನಂತರ ಅವಭೃತ ಸ್ನಾನ, ಧ್ವಜಾವರೋಹಣ ತದನಂತರ ಮಾತೃಸಂಗಮ ಕಾರ್ಯಕ್ರಮ ನಡೆಯಲಿದೆ.
