ಕಾರ್ಕಳ:ಕಳೆದ 15 ವರ್ಷಗಳಿಂದ ಗೃಹೋಪಯೋಗಿ ವಸ್ತುಗಳು,ಎಲೆಕ್ಟ್ರಾನಿಕ್ ಉಪಕರಣಗಳು ಹಾಗೂ ಪೀಠೋಪಕರಣಗಳ ಮಾರಾಟ ಹಾಗೂ ಸೇವೆಯಲ್ಲಿ ಹೆಸರುವಾಸಿಯಾಗಿರುವ ಕಾರ್ಕಳದ ಶಿವಂ ಎಲೆಕ್ಟ್ರಾನಿಕ್ಸ್ ಇದರ ನವೀಕೃತ ಶಾಖೆಯು ಅಜೆಕಾರು ವ್ಯವಸಾಯ ಸೇವಾ ಸಹಕಾರ ಸಂಘದ, ಸಹಕಾರಿ ಸೌಧ ಕಟ್ಟಡದಲ್ಲಿ ಅಕ್ಷಯ ತೃತೀಯ ದಿನವಾದ ಶುಕ್ರವಾರ ಶುಭಾರಂಭಗೊಂಡಿದೆ.

ಸುಮಾರು 5 ಸಾವಿರ ಚದರ ಅಡಿ ವಿಸ್ತೀರ್ಣದ ಶಿವಂ ಎಲೆಕ್ಟ್ರಾನಿಕ್ಸ್ & ಫರ್ನಿಚರ್ಸ್ ನ ನವೀಕೃತ ಮಳಿಗೆಯನ್ನು ವೇದಮೂರ್ತಿ ಪ್ರಕಾಶ್ ಭಟ್ ಪೆರ್ವಾಜೆ ಉದ್ಘಾಟಿಸಿ ಶುಭ ಹಾರೈಸಿದರು.
ನೂತನ ಉದ್ಯಮವನ್ನು ನಿವೃತ್ತ ಶಿಕ್ಷಕರಾದ ಎಚ್ .ಕೆ.ಗಣಪಯ್ಯ ಭಟ್ ಸುಚೇತನಾ ಪಿ ದಂಪತಿ, ಹಾಗೂ ಶಾಂತಿರಾಜ ಹೆಗ್ಡೆ ಹಾಗೂ ಮಕರಂದ ಹೆಗ್ಡೆ ದಂಪತಿ, ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಎಚ್.ಕೆ ಗಣಪಯ್ಯ ಭಟ್ ಮಾತನಾಡಿ, ಗ್ರಾಹಕರಿಗೆ ಸದಾ ನಗುಮುಖದ ಸೇವೆ ನೀಡುವಲ್ಲಿ ಶಿವಂ ಎಲೆಕ್ಟ್ರಾನಿಕ್ಸ್ ಸಂಸ್ಥೆ ಸದಾ ಮುಂಚೂಣಿಯಲ್ಲಿದೆ. ಉದ್ಯಮದಲ್ಲಿ ಕಷ್ಟ ನಷ್ಟದ ಸವಾಲುಗಳು ಸಹಜ, ಇದೆಲ್ಲವನ್ನೂ ಮೀರಿ ಭಗವಂತನ ಅನುಗ್ರಹ ಹಾಗೂ ಪರಿಶ್ರಮವಿದ್ದರೆ ಯಶಸ್ಸು ಸಾಧಿಸಲು ಸಾಧ್ಯವಾಗುತ್ತದೆ.ಅಕ್ಷಯ ತೃತೀಯ ಶುಭದಿನದಂದು ಶುಭಾರಂಭವಾದ ನೂತನ ಶಿವಂ ಎಲೆಕ್ಟ್ರಾನಿಕ್ಸ್ & ಫರ್ನಿಚರ್ಸ್ ಉದ್ಯಮವು ನಿತ್ಯವೂ ಅಕ್ಷಯ ಪಾತ್ರೆಯಂತೆ ತುಂಬಿ ಬರಲಿ ಎಂದು ಶುಭ ಹಾರೈಸಿದರು

ಈ ಸಂದರ್ಭದಲ್ಲಿ ತಾಲೂಕು ಪಂಚಾಯತ್ ಮಾಜಿ ಉಪಾಧ್ಯಕ್ಷ ಹರೀಶ್ ನಾಯಕ್, ಉದ್ಯಮಿ ಸುರೇಂದ್ರ ನಾಯಕ್, ರತ್ನಾಕರ ಅಮೀನ್, ಡಾ. ಸುದರ್ಶನ ಹೆಬ್ಬಾರ್, ಸಂದೀಪ್ ಶೆಟ್ಟಿ, ಪ್ರಶಾಂತ್ ಶೆಟ್ಟಿ, ಶಿವಂ ಎಲೆಕ್ಟ್ರಾನಿಕ್ಸ್ ಸಂಸ್ಥೆಯ ಮಾಲಕರ ತಂದೆತಾಯಿಗಳಾದ ಬಾಲಕೃಷ್ಣ ಶೆಟ್ಟಿ, ರಾಜೀವಿ ಶೆಟ್ಟಿ, ಸಂಸ್ಥೆಯ ಮಾಲಕ ಗುರುಪ್ರಸಾದ್ ಶೆಟ್ಟಿ, ಸುಪ್ರಿಯಾ ಶೆಟ್ಟಿ, ಅಕ್ಷತಾ ಶೆಟ್ಟಿ, ಪ್ರಭಾತ್ ಶೆಟ್ಟಿ ಉಪಸ್ಥಿತರಿದ್ದರು
ಅಜಿತ್ ಕುಮಾರ್ ಕಾರ್ಯಕ್ರಮ ನಿರೂಪಿಸಿದರು






