Share this news

ಕಾರ್ಕಳ : ವಿದ್ಯಾರ್ಥಿಗಳುಕೇವಲ ವಿದ್ಯಾರ್ಥಿ ಜೀವನಕ್ಕಷ್ಟೇ ಸೀಮಿತರಲ್ಲ . ಶಿಕ್ಷಕರಿಗೆ ಎಂದೆಂದಿಗೂ ಮುದ್ದು ಮಕ್ಕಳೇ,ನಾವು ವೃತ್ತಿ ಬದುಕಿನಿಂದ ನಿವೃತ್ತಿ ಹೊಂದಿದರೂ ನಮ್ಮ ವಿದ್ಯಾರ್ಥಿಗಳು ನಮ್ಮನ್ನು ಶಿಕ್ಷಕರಂದೇ ಸಂಭೋದಿಸುತ್ತಾರೆ, ಇದಕ್ಕಿಂತ ಮಿಗಿಲಾಗಿ ನಮಗೇನು ಬೇಕು ಎಂದು ನಿವೃತ್ತ ಶಿಕ್ಷಕ ಸುಂದರ ಸೇರ್ವೇಗಾರ್ ಹೇಳಿದರು.
ಅವರು ಎಣ್ಣೆಹೊಳೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಭಾನುವಾರ ನಡೆದ 1998 – 99ರ ಬ್ಯಾಚಿನ ಪೂರ್ವ ವಿದ್ಯಾರ್ಥಿಗಳು ನಡೆಸಿದ, ಗುರುವಂದನಾ ಹಾಗೂ ಸ್ನೇಹ ಸಮ್ಮಿಲನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಾವು ಹೆತ್ತ ಮಕ್ಕಳಷ್ಟೇ ನಮ್ಮ ಮಕ್ಕಳಲ್ಲ,ನಮ್ಮ ವಿದ್ಯಾರ್ಥಿಗಳೆಲ್ಲರೂ ನಮ್ಮ ಮಕ್ಕಳೇ, ತಪ್ಪು ಮಾಡಿದಾಗ ಶಿಕ್ಷಿಸಿ ಬುದ್ಧಿ ಹೇಳಿರಬಹುದು, ಆದರೆ ಶಿಕ್ಷೆ ನೀಡಲೇಬೇಕೆಂಬ ಉದ್ದೇಶದಿಂದ ಎಂದಿಗೂ ಶಿಕ್ಷಿಸಲಾರೆವು,ನಮ್ಮ ವಿದ್ಯಾರ್ಥಿಗಳನ್ನು ಭವಿಷ್ಯದಲ್ಲಿ ಮತ್ಯಾರು ಶಿಕ್ಷಿಸದ ರೀತಿಯ ಶಿಸ್ತಿನ ಸಿಪಾಯಿಗಳಾಗಬೇಕೆಂಬ ಉದ್ದೇಶವಷ್ಟೇ ನಮ್ಮದು ಎಂದು ಮತ್ತೋರ್ವ ಶಿಕ್ಷಕ ಸದಾನಂದ ನಾಯಕ್ ಅಭಿಪ್ರಾಯಪಟ್ಟರು.
ಹಿರಿಯ ಶಿಕ್ಷಕರಾದ ಮಾಲತಿ ರಾವ್, ಸುಂದರಿ ಪೂಜಾರಿ, ವಸಂತಿ ಶೆಟ್ಟಿ, ಗೀತಾ ಭಟ್, ವೆಂಕಟರಮಣ ಉಪಾಧ್ಯಾಯರು,ಶಾಂತಿ, ರಮಣಿ,ಜ್ಯೋತಿ, ಉಮಾ ಶಂಕರ್, ವಿದ್ಯಾರ್ಥಿಗಳಿಗೆ ಶುಭ ಹಾರೈಸಿ ಇಂದಿನ ಕಾರ್ಯಕ್ರಮ ಅತ್ಯಂತ ಖುಷಿ ನೀಡಿದೆ ಎಂದು ಭಾವುಕರಾಗಿ ಮಾತನಾಡಿದರು.
ವಿದೇಶದಲ್ಲಿ ಕರ್ತವ್ಯದಲ್ಲಿದ್ದು ಈ ಕಾರ್ಯಕ್ರಮಕ್ಕಾಗಿ ಆಗಮಿಸಿ ಆತ್ಮೀಯರೆಲ್ಲರಿಗೂ ವಿಶೇಷ ಉಡುಗೊರೆಗಳನ್ನು ತಂದು ಪರ್ವಾಜ್ ಎಣ್ಣೆಹೊಳೆ ಜೊತೆಯಾದರೆ, ಅವರೊಂದಿಗೆ ವಿದೇಶದಿಂದ ನಿತ್ಯಾನಂದ, ಗಫೂರ್ ಮನ್ಸೂರ್ , ಹಕಿಮ್, ಕಿರಣ್ ಕುಮಾರ್ ಸಾಥ್ ನೀಡಿದರು.
ಇದರೊಂದಿಗೆ ಅಮರ್, ಆರಿಫ್, ಹರೀಶ್ ಕಾರ್ತಿಕ್. ನಾಗೇಶ್ ಪ್ರಕಾಶ್, ರಾಜೇಶ್ ರಮಾನಂದ, ಸಜಿತ್,ಶಶಿಧರ್ ಸುಕೇಶ್, ಸುನಿಲ್, ಸುರೇಶ್ ಯೋಗೀಶ್,ಮಮತಾ, ಕಾಂಚನ, ಸರೋಜಿನಿ, ಸುಧಾ, ಸುಪ್ರಿಯಾ, ಸುಪ್ರಿಯಾ ಶೆಟ್ಟಿ ಮೊದಲಾದವರು ಜೊತೆ ಸೇರಿಕೊಂಡರು.
ಇದೇ ಸಂದರ್ಭದಲ್ಲಿ ನಮ್ಮನ್ನಗಲಿದ ಶಿಕ್ಷಕರುಗಳಾದ ಸುಂದರ ಪೂಜಾರಿ, ದಿವಾಕರ್, ಹಸನಬ್ಬ ಎಣ್ಣೆಹೊಳೆ, ಸುಂದರ್ ನಾಯ್ಕ್ ಇವರನ್ನು ಸ್ಮರಿಸಲಾಯಿತು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಎಲ್ಲ ಶಿಕ್ಷಕರುಗಳನ್ನು ವಿಶೇಷವಾಗಿ ಗೌರವಿಸಲಾಯಿತು, ಉಟೋಪಚಾರದ ನಂತರ ಶಿಕ್ಷಕರೆಲ್ಲರನ್ನು ಅವರವರ ಮನೆಗೆ ಬೀಳ್ಕೊಟ್ಟು ವಿದ್ಯಾರ್ಥಿಗಳು ವಿವಿಧ ಮನರಂಜನ ಆಟೋಟ ಸ್ಪರ್ಧೆಗಳಲ್ಲಿ ತೊಡಗಿಕೊಂಡು,ಮ್ಯೂಸಿಕಲ್ ಚೇರ್, ಪೆನ್ಸಿಲ್ ಕಟ್ಟರ್,ಕ್ರಿಕೆಟ್ ಇವೇ ಮೊದಲಾದ ಆಟೋಟಗಳನ್ನು ಆಡಿಸಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು,ಆಟೋಟ ಸ್ಪರ್ಧೆಯ ಜವಾಬ್ದಾರಿಯನ್ನು ಜಯಂತಿ ಹಾಗೂ ಸುಕುಮಾರ್ ವಹಿಸಿಕೊಂಡರು.ಕಾರ್ಯಕ್ರಮದಲ್ಲಿ ಅನಿಲ್ ಕುಮಾರ್ ಪ್ರಾರ್ಥಿಸಿ ಪ್ರಿಯದರ್ಶಿನಿ ಸ್ವಾಗತಿಸಿ ಜಯಂತಿ ನಾಯಕ್ ಪ್ರಾಸ್ತಾವಿಸಿ ಸುಕುಮಾರ್ ಶೆಟ್ಟಿ, ಧನ್ಯವಾದ ಸಮರ್ಪಿಸಿ ರೇಷ್ಮಾ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ ಕಾರ್ಯಕ್ರಮವನ್ನು ಯಶಸ್ವಿಯಾಗಿಸಿದರು.

 

 

 

 

                        

                          

 

Leave a Reply

Your email address will not be published. Required fields are marked *