ಹೆಬ್ರಿ: ಸರ್ಕಾರಿ ಬಸ್ ಚಾಲಕನಿಗೆ ಮೂವರು ಪುಂಡರ ಗ್ಯಾಂಗ್ ಕಾರನ್ನು ಅಡ್ಡಗಟ್ಟಿ ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ ಘಟನೆ ನಡೆದಿದೆ.
ಸರ್ಕಾರಿ ಬಸ್ ಚಾಲಕ ಶಿವಾನಂದ (38) ಎಂಬವರು ಹಲ್ಲೆಗೊಳಗಾಗಿದ್ದು, ಅವರು ಶುಕ್ರವಾರ ಬೆಳಗ್ಗೆ ಆಗುಂಬೆ ಕಡೆಯಿಂದ ಸೋಮೇಶ್ವರ ಮಾರ್ಗವಾಗಿ ಉಡುಪಿ ಕಡೆಗೆ ತನ್ನ ಬಸ್ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಬಸ್ ಹಿಂದಿನಿಂದ ಕೇರಳ ನೋಂದಣಿಯ ಕಾರಿನಲ್ಲಿ ಮೂವರು ಕರ್ಕಶವಾಗಿ ಹಾರ್ನ್ ಮಾಡಿಕೊಂಡು ಬಸ್ ಗೆ ಕಾರನ್ನು ಅಡ್ಡಗಟ್ಟಿ ಕಾರಿನಲ್ಲಿದ್ದ ಅಬೂಬಕ್ಕರ್,ಜುನೈದ್ ಮೊಹಮ್ಮದ್ ಹಾಗೂ ರಿಜ್ವಾನ್ ಖಾನ್ ಕೆಳಗಿಳಿದು ಅವಾಚ್ಯವಾಗಿ ನಿಂದಿಸಿ ಹಲ್ಲೆ ನಡೆಸಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಚಾಲಕ ಶಿವಾನಂದ ಹೆಬ್ರಿ ಪೊಲೀಸ್ ಠಾಣೆಗೆ ದೂರು ನೀಡಿದ್ದು,ಈ ಕುರಿತು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.