ಕಾರ್ಕಳ: ಪ್ರವಾಸೋದ್ಯಮ ಬೆಳೆಯುವ ನಿಟ್ಟಿನಲ್ಲಿ ಹೊಟೇಲುಗಳ ಪಾತ್ರ ಬಹುಮುಖ್ಯವಾಗಿದೆ.ಸ್ಥಳೀಯ ಗ್ರಾಹಕರು ಹಾಗೂ ದೂರದ ಊರಿನಿಂದ ಬರುವ ಪ್ರವಾಸಿಗರಿಗೆ ಸುಸಜ್ಜಿತ ಹಾಗೂ ಶುಚಿ,ರುಚಿಕರವಾದ ಆಹಾರದ ವ್ಯವಸ್ಥೆ ಕಲ್ಪಿಸುವುದು ಕೂಡ ಅತ್ಯಂತ ಸವಾಲಿನ ಸಂಗತಿಯಾಗಿದೆ ಎಂದು ಕಾರ್ಕಳ ಶಾಸಕ ಹಾಗೂ ಮಾಜಿ ಸಚಿವ ಸುನಿಲ್ ಕುಮಾರ್ ಹೇಳಿದರು.
ಅವರು ಕಾರ್ಕಳದ ಬೈಪಾಸ್ ರಸ್ತೆಯ ಶಿವತಿಕೆರೆ ದೇವಸ್ಥಾನದ ಬಳಿ ನೂತನವಾಗಿ ನಿರ್ಮಾಣಗೊಂಡ ಹೊಟೇಲ್ ಕೃಷ್ಣ ವೈಭವ ಇದನ್ನು ಉದ್ಘಾಟಿಸಿ ಮಾತನಾಡಿದರು.
ಇದೇ ವೇಳೆ ಮಾತನಾಡಿದ ಅವರು,ರಾಜ್ಯ ಹೆದ್ದಾರಿಯಲ್ಲಿ ಸಾಗುವ ಯಾತ್ರಿಕರಿಗೆ ಸುಸಜ್ಜಿತ ಹೊಟೇಲಿನ ಅವಶ್ಯಕತೆಯಿತ್ತು.ಇದೀಗ ಕೃಷ್ಣ ವೈಭವ ಉದ್ಘಾಟನೆ ಮೂಲಕ ಅದು ನೆರವೇರಿದೆ. ಹೆಸರೇ ಸೂಚಿಸುವಂತೆ, ಹೊಟೇಲ್ ಕೃಷ್ಣ ವೈಭವ , ಗತಕಾಲದ ದ್ವಾಪರಯುಗದ ಕೃಷ್ಣನ ವೈಭವದಂತೆ ಮೆರೆಯಲಿ,ಉಡುಪಿಗೆ ಬರುವ ಪ್ರವಾಸಿಗರು ಕಾರ್ಕಳದ ಹೊಟೇಲ್ ಕೃಷ್ಣ ವೈಭವಕ್ಕೆ ಬರುವಂತಾಗಲಿ, ಕೃಷ್ಣ ತಂತ್ರಿಗಳ ಉಸ್ತುವಾರಿ ಹಾಗೂ ಶ್ರೀಕರ ತಂತ್ರಿಗಳ ಮಾಲೀಕತ್ವದ ಈ ಉದ್ಯಮ ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.
ಜಾರ್ಕಳ ಪ್ರಸಾದ್ ತಂತ್ರಿ ಮಾತನಾಡಿ, ಉಡುಪಿ ಶ್ರೀ ಕೃಷ್ಣನ ಹೆಸರಿನಲ್ಲಿ ಸಹೋದರ ಶ್ರೀಕರ ತಂತ್ರಿಯ ಮಾಲೀಕತ್ವದ ಈ ಉದ್ಯಮವು ಇನ್ನಷ್ಟು ಎತ್ತರಕ್ಕೆ ಬೆಳೆಯಲಿ ಎಂದು ಶುಭ ಹಾರೈಸಿದರು.
ಈ ಸಂದರ್ಭದಲ್ಲಿ ಮುಖ್ಯ ಅತಿಥಿಗಳಾಗಿ ಜಾರ್ಕಳ ಚಂದ್ರಶೇಖರ ತಂತ್ರಿ, ಕಾರ್ಕಳ ಬಾರ್ ಅಸೋಸಿಯೇಷನ್ ಅಧ್ಯಕ್ಷ ಸುನಿಲ್ ಕುಮಾರ್ ಶೆಟ್ಟಿ, ಶಿವತಿಕೆರೆ ಉಮಾಮಹೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರರಾದ ದಾಮಣ್ಣ , ನ್ಯಾಯವಾದಿ ಹರಿ ಮೊಗೆರಾಯ, ಶ್ರೀಶ ಕುಮಾರ್ ಉಪಾಧ್ಯಾಯ, ಅರವಿಂದ ಭಟ್, ಗುರುಪ್ರಸಾದ್ ರಾವ್, ಜಾರ್ಕಳ ಪ್ರಸಾದ್ ತಂತ್ರಿ, ಕಾರ್ಕಳ ಪುರಸಭಾ ಮುಖ್ಯಾಧಿಕಾರಿ ರೂಪಾ ಶೆಟ್ಟಿ ಮುಂತಾದವರು ಉಪಸ್ಥಿತರಿದ್ದರು.
ಸಂಸ್ಥೆಯ ಮಾಲಕರಾದ ಶ್ರೀಕರ ತಂತ್ರಿ ದಂಪತಿ ಅತಿಥಿಗಳನ್ನು ಗೌರವಿಸಿದರು.