Share this news

ನವದೆಹಲಿ :ಲೋಕಸಭಾ ಚುನಾವಣೆಯಲ್ಲಿ ಸರಳ ಬಹುಮತದೊಂದಿಗೆ ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ಪ್ರಧಾನಿಯಾಗಿ ನರೇಂದ್ರ ಮೋದಿ ಅವರು ಇಂದು ಮೂರನೇ ಬಾರಿಗೆ ಭಾರತದ ಪ್ರಧಾನ ಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇದಲ್ಲದೇ ಕರ್ನಾಟಕದಿಂದ ಎಚ್.ಡಿ ಕುಮಾರಸ್ವಾಮಿ, ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ ಸೇರಿ ಒಟ್ಟು 29 ಜನ ಸಂಸದರು ಕೇಂದ್ರ ಸಂಪುಟದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ರಾಷ್ಟçಪತಿ ಭವನದಲ್ಲಿ ನಡೆಯಲಿರುವ ಪ್ರಮಾಣ ವಚನ ಸ್ವೀಕಾರ ಸಮಾರಂಭಕ್ಕೆ ಈಗಾಗಲೇ ಸಿದ್ಧತೆಗಳು ಪೂರ್ಣಗೊಂಡಿವೆ. ಪ್ರಮಾಣ ವಚನ ಸಮಾರಂಭದಲ್ಲಿ ವಿದೇಶಿ ಗಣ್ಯರ ಸಹಿತ ಹಲವಾರು ಗಣ್ಯರು ಭಾಗವಹಿಸಲಿರುವ ಹಿನ್ನಲೆಯಲ್ಲಿ ಭಾರೀ ಭದ್ರತೆ ಒದಗಿಸಲಾಗಿದೆ.
ಪ್ರಮಾಣ ವಚನಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿ ಭಾನುವಾರ ಮುಂಜಾನೆ ರಾಜ್ ಘಾಟ್ ನಲ್ಲಿ ಮಹಾತ್ಮ ಗಾಂಧಿ ಸಮಾಧಿಗೆ ಅವರಿಗೆ ಗೌರವ ಸಲ್ಲಿಸಿದ ಬಳಿಕ ರಾಷ್ಟ್ರೀಯ ಯುದ್ಧ ಸ್ಮಾರಕ ಹಾಗೂ ಅಟಲ್ ಬಿಹಾರಿ ವಾಜಪೇಯಿ ಅವರ ಸಮಾಧಿಗೂ ಪುಷ್ಪನಮನ ಸಲ್ಲಿಸಿ ಗೌರವ ಸಲ್ಲಿಸಿದರು.

ಸಂಜೆ 7 ಗಂಟೆಗೆ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಸಹಿತ ಎಲ್ಲಾ ಸಚಿವರಿಗೂ ರಾಷ್ಟçಪತಿ ದ್ರೌಪದಿ ಮುರ್ಮು ಪ್ರತಿಜ್ಞಾವಿಧಿ ಬೋಧಿಸಲಿದ್ದಾರೆ
ಮೋದಿ ಸಂಪುಟದಲ್ಲಿ ಈ ಕೆಳಕಂಡ ಸಂಸದರು ಸಂಪುಟದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
ಕೇರಳದ ತ್ರಿಶೂರ್ ಲೋಕಸಭಾ ಕ್ಷೇತ್ರದ ಏಕೈಕ ಬಿಜೆಪಿ ಸಂಸದ ಸುರೇಶ್ ಗೋಪಿ, ತಮಿಳುನಾಡು ಬಿಜೆಪಿ ಅಧ್ಯಕ್ಷ ಕೆ.ಅಣ್ಣಾಮಲೈ,ರವ್ನೀತ್ ಸಿಂಗ್,ಹರ್ಷ್ ಮಲ್ಹೋತ್ರಾ,ಗಿರಿರಾಜ್ ಸಿಂಗ್,ಧಮೇAðದ್ರ ಪ್ರಧಾನ್, ಅನ್ನಪೂರ್ಣ ದೇವಿ,ಜಿತಿನ್ ಪ್ರಸಾದ,ಹರ್ದೀಪ್ ಪುರಿ,ಮನ್ಸುಖ್ ಭಾಯ್ ಮಾಂಡವಿಯಾ,ರಾವ್ ಇಂದರ್ಜಿತ್ ಸಿಂಗ್,ಕಿರಣ್ ರಿಜಿಜು,ಅಶ್ವಿನಿ ವೈಷ್ಣವ್,
ರಾಮದಾಸ್ ಅಠಾವಳೆ,ರಕ್ಷಾ ಖಾಡ್ಸೆ,ಅನುಪ್ರಿಯಾ ಪಟೇಲ್,ಕಮಲ್ಜೀತ್ ಶೆರಾವತ್,ಶಂತನು ಠಾಕೂರ್,ಮನೋಹರ್ ಲಾಲ್ ಖಟ್ಟರ್,ಪ್ರತಾಪ್ ರಾವ್ ಜಾಧವ್,ಪಿಯೂಷ್ ಗೋಯಲ್,
ಜ್ಯೋತಿರಾದಿತ್ಯ, ಎಚ್.ಡಿ. ಕುಮಾರಸ್ವಾಮಿ, ಜಿತೇಂದ್ರ ಸಿಂಗ್,ಸರ್ಬಾನAದ ಸೋನೊವಾಲ್,ನಿತಿನ್ ಗಡ್ಕರಿ,ಚಿರಾಗ್ ಪಾಸ್ವಾನ್,ಅರ್ಜುನ್ ಮೇಘವಾಲ್,ಆರ್ ಎಲ್ ಡಿ ಮುಖ್ಯಸ್ಥ ಜಯಂತ್ ಚೌಧರಿ

 

 

 

                        

                          

 

 

 

 

 

                        

                          

 

Leave a Reply

Your email address will not be published. Required fields are marked *