ಕಾರ್ಕಳ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಯವರ ಭಾವಚಿತ್ರವನ್ನು ಶ್ರದ್ಧಾಂಜಲಿ ಸಲ್ಲಿಸುವಂತೆ ಎಡಿಟ್ ಮಾಡಿ ಅದಕ್ಕೆ ಹೂಮಾಲೆ ಹಾಗೂ ಊದುಬತ್ತಿ ಕಡ್ಡಿ ಹೊತ್ತಿಸಿ ಅವಹೇಳನ ಮಾಡಿದ ಕಾರ್ಕಳದ ಯುವಕನ ವಿರುದ್ಧ ಕಾರ್ಕಳ ಕಾಂಗ್ರೆಸ್ ವತಿಯಿಂದ ಕಾರ್ಕಳ ನಗರ ಠಾಣೆಯಲ್ಲಿ ದೂರು ದಾಖಲಾಗಿದೆ.
ಸುಮಂತ್ ಬಾಳಿಗಾ ಎಂಬ ಯುವಕ ಮೌಸಮಿ ಅಫೀಶಿಯಲ್ಸ್ ಎಂಬ ಫೇಸ್’ಬುಕ್ ಪೇಜ್ ನಲ್ಲಿ ರಾಹುಲ್ ಗಾಂಧಿಯವರ ಫೋಟೋ ಎಡಿಟ್ ಮಾಡಿದ್ದು, ರಾಹುಲ್ ಭಾವಚಿತ್ರಕ್ಕೆ ಹೂವಿನ ಹಾರ, ದೀಪ ಹಾಗೂ ಊದುಬತ್ತಿ ಹಚ್ಚಿ ಭಾವಪೂರ್ಣ ಶ್ರದ್ಧಾಂಜಲಿ ಎನ್ನುವಂತೆ ಬಿಂಬಿಸಿ ಅವಹೇಳನ ಮಾಡಲಾಗಿದೆ,ಮಾತ್ರವಲ್ಲದೇ ಸಮಾಜದಲ್ಲಿ ಪಕ್ಷಗಳ ನಡುವೆ ದ್ವೇಷ ಹರಡಲು ನಡೆಸಿದ ಷಡ್ಯಂತ್ರ ಇದಾಗಿದೆ ಎಂದು ಕಾಂಗ್ರೆಸ್ ಮುಖಂಡ ಸುಹಾಸ್ ಕಾವ ಎಂಬವರು ಕಾರ್ಕಳ ನಗರ ಠಾಣೆಗೆ ದೂರು ನೀಡಿದ್ದಾರೆ.
ಈ ಕುರಿತು ದೂರು ದಾಖಲಿಸಿಕೊಂಡ ಪೊಲೀಸರು ಆರೋಪಿ ಬಂಧನಕ್ಕೆ ಮುಂದಾಗಿದ್ದಾರೆ.











