Share this news

ಹೈದರಾಬಾದ್‌ :ರಾಜಕಾರಣದಲ್ಲಿ ಅಧಿಕಾರ ಎಂದಿಗೂ ಶಾಶ್ವತ ಅಲ್ಲ ಎನ್ನುವುದು ಮತ್ತೆ ಸಾಬೀತಾಗಿದೆ. ಆಂಧ್ರಪ್ರದೇಶದಲ್ಲಿ ಈ ಹಿಂದೆ ಅಧಿಕಾರದಲ್ಲಿದ್ದ ಜಗನ್ ಮೋಹನ್ ರೆಡ್ಡಿ ಸರ್ಕಾರವು ಚಂದ್ರಬಾಬು ನಾಯ್ಡು ಅವರನ್ನು ರಾತ್ರೋರಾತ್ರಿ ಬಂಧಿಸಿ ಜೈಲಿಗಟ್ಟಿತ್ತು. ಆದರೆ ಬಳಿಕ ನಡೆದ ಆಂದ್ರಪ್ರದೇಶದ ವಿಧಾನಸಭಾ ಚುನಾವಣೆಯಲ್ಲಿ ಜಗನ್ ಮೋಹನ್ ರೆಡ್ಡಿ ನೇತೃತ್ವದ YSRCP ಪಕ್ಷ ಹೀನಾಯ ಸೋತ ಬಳಿಕ ಮಾಜಿ ಸಿಎಂ ಜಗನ್ ಮೋಹನ್ ರೆಡ್ಡಿ ಅದೃಷ್ಟ ಕೆಟ್ಟಿದೆ.
ಅಂದು ಜೈಲುವಾಸ ಅನುಭವಿಸಿ ತೀವ್ರ ಮುಖಭಂಗ ಅನುಭವಿಸಿದ್ದ ಚಂದ್ರಬಾಬು ತನಗಾದ ಅವಮಾನಕ್ಕೆ ಸೇಡು ತೀರಿಸಿಕೊಂಡಿದ್ದಾರೆ.
ಶನಿವಾರ ಮುಂಜಾನೆ ಅಧಿಕಾರಿಗಳು ಆಂದ್ರದ ತಾಡೆಪಲ್ಲಿಯಲ್ಲಿನ YSRCP ಪ್ರಧಾನ ಕಚೇರಿಯನ್ನು ನೆಲಸಮಗೊಳಿಸಿದ್ದಾರೆ.
ಇದಲ್ಲದೇ ಕಟ್ಟಡ ಧ್ವಂಸಗೊಳಿಸಿದ ಕೆಲವೇ ಗಂಟೆಗಳಲ್ಲಿ ಮಾಜಿ ಸಿಎಂ ವೈ.ಎಸ್.ಜಗನ್ ಮೋಹನ್ ರೆಡ್ಡಿ ಅವರ ಪತ್ನಿ ಭಾರತಿ ಅವರ ಪಿಎ ವರ್ರಾ ರವೀಂದ್ರ ರೆಡ್ಡಿ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಈ ಹಿಂದೆ YSRCP ಅಧಿಕಾರದಲ್ಲಿದ್ದಾಗ ವೈಎಸ್ ಶರ್ಮಿಳಾ, ಸುನೀತಾ ರೆಡ್ಡಿ ಮತ್ತು ಗೃಹ ಸಚಿವೆ ವಂಗಲಪುಡಿ ಅನಿತಾ ಅವರು ಸಾಮಾಜಿಕ ಮಾಧ್ಯಮದಲ್ಲಿ ಅನುಚಿತ ಸಂದೇಶಗಳನ್ನು ಪೋಸ್ಟ್ ಮಾಡಿದ್ದರು. ಜತೆಗೆ ಅಶ್ಲೀಲ ಕಾಮೆಂಟ್ ಗಳನ್ನು ಮಾಡಿದ್ದಾರೆ ಎನ್ನುವ ಆರೋಪದಲ್ಲಿ ವೈಎಸ್ ಭಾರತಿಯ ಪಿಎ ರವೀಂದ್ರ ರೆಡ್ಡಿ ಅವರನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ. ಕಡಪದಿಂದ ಕದ್ರಿಗೆ ಹೋಗುವಾಗ ಪೊಲೀಸರು ಆತನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ತಿಳಿದುಬಂದಿದೆ.

 

 

 

                        

                          

 

 

 

 

 

                        

                          

 

 

Leave a Reply

Your email address will not be published. Required fields are marked *