ಹೆಬ್ರಿ: ವ್ಯಕ್ತಿಯೊಬ್ಬರಿಗೆ ಹಲ್ಲೆ ನಡೆಸಿ ಜೀವ ಬೆದರಿಕೆಯೊಡ್ಡಿದ ಘಟನೆ ಬ್ರಹ್ಮಾವರ ತಾಲೂಕಿನ ಕಳ್ತೂರು ಗ್ರಾಮದ ಸಂತೆಕಟ್ಟೆ ಎಂಬಲ್ಲಿ ಭಾನುವಾರ ರಾತ್ರಿ ನಡೆದಿದೆ.
ಕಾರ್ಕಳ ತಾಲೂಕು ನಿಟ್ಟೆಯ ಭೋಜ ವಿ. ಎಂಬವರು ಭಾನುವಾರ ಸಂಜೆ ಸಂತೆಕಟ್ಟೆಯಲ್ಲಿರುವ ಪಂಚವಟಿ ಬಾರ್ಗೆ ಮದ್ಯ ಸೇವಿಸಲು ಹೋಗಿದ್ದು, ಆ ವೇಳೆ ಅಲ್ಲಿಯೇ ಇದ್ದ ತಮ್ಮ ಪರಿಚಯದ ದಿನಕರ ಎಂಬವರು ಭೋಜ ರವರಿಗೆ ನಮಸ್ಕಾರ ಮಾಡಿದ್ದು ಇದಕ್ಕೆ ಪ್ರತಿಯಾಗಿ ಬೋಜ ಅವರು ನಮಸ್ಕಾರ ಮಾಡಿದ್ದರು.
ಬಳಿಕ 7.35ರ ವೇಳೆಗೆ ಬಾರ್ನಿಂದ ಹೊರಗೆ ಬಂದವರು ಪಕ್ಕದಲ್ಲಿದ್ದ ಗೂಡಂಗಡಿ ಅಸ್ತವ್ಯಸ್ತವಾಗಿರುವುದನ್ನು ನೋಡಿ ದಿನಕರ ರವರನ್ನು ಕೇಳಿದಾಗ ಆತನು ತನ್ನ ಮಾರುತಿ ಕಾರಿನಲ್ಲಿದ್ದ ಕೋಲನ್ನು ತೆಗೆದು ಎಕಾಏಕಿ ಬೆನ್ನಿಗೆ ,ಕೈಗೆ ಹೊಡೆದು ಅವಾಚ್ಯ ಶಬ್ದಗಳಿಂದ ಬೈದು ಇದನ್ನು ಯಾರಿಗಾದರು ಹೇಳಿದರೆ ಕೊಲ್ಲುವುದಾಗಿ ಜೀವ ಬೆದರಿಕೆ ಹಾಕಿರುತ್ತಾನೆ ಎಂದು ಭೋಜ ರವರು ದೂರು ನೀಡಿದ್ದು, ಹೆಬ್ರಿ ಠಾಣೆಯಲ್ಲಿ ದೂರು ದಾಖಲಾಗಿರುತ್ತದೆ.














