ಕಾರ್ಕಳ: ತಾಲೂಕಿನ ಕಡ್ತಲ ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿಯ ಸಭೆಯು ಕಡ್ತಲ ಸಮಾಜ ಮಂದಿರದಲ್ಲಿ ಸಂಘದ ಅಧ್ಯಕ್ಷರಾದ ಪುರಂದರ ನಾಯಕ್ ಅಧ್ಯಕ್ಷತೆಯಲ್ಲಿ ನಡೆಯಿತು.
ಸಮಿತಿಯ 37ನೇ ವರ್ಷದ ನೂತನ ಅಧ್ಯಕ್ಷರಾಗಿ ಗೋಪಾಲ ಪೂಜಾರಿ ಕಡ್ತಲ ಹಾಗೂ ಕಾರ್ಯದರ್ಶಿಯಾಗಿ ಶೇಖರ್ ಕಡ್ತಲ ಆಯ್ಕೆಯಾಗಿದ್ದಾರೆ.
ಉಪಾಧ್ಯಕ್ಷರಾಗಿ ಹರೀಶ್ ಪೂಜಾರಿ ಸಿರಿಬೈಲು, ಜೊತೆ ಕಾರ್ಯದರ್ಶಿ ಹರೀಶ್ ಹೆಗ್ಡೆ ದೇವಸ್ಯ, ಕೋಶಾಧಿಕಾರಿ ರವಿರಾಜ್ ನಾಯಕ್ ಮಠದಬೆಟ್ಟು ಹಾಗೂ ಕ್ರೀಡಾ ಹಾಗೂ ಸಾಂಸ್ಕ್ರತಿಕ ಕಾರ್ಯದರ್ಶಿಯಾಗಿ ಸುಮನ್ ಪೂಜಾರಿ ಸಿರಿಬೈಲು ಸರ್ವಾನುಮತದಿಂದ ಆಯ್ಕೆಯಾಗಿದ್ದಾರೆ.














