Share this news

ಕಾರ್ಕಳ: ಕಳೆದ ಕೆಲ ದಿನಗಳಿಂದ ಸುರಿಯುತ್ತಿರುವ ಭಾರೀ ಮಳೆಗೆ ತಾಲೂಕಿನ ಹಲವೆಡೆ ಅಪಾರ ಪ್ರಮಾಣದ ಹಾನಿ ಸಂಭವಿಸಿದ್ದು, ಪ್ರವಾಹದಿಂದ ನೂರಾರು ಎಕರೆ ಕೃಷಿ ಜಮೀನಿಗೆ ನೀರು ನುಗ್ಗಿದೆ.

ತಾಲೂಕಿನ ಶಿರ್ಲಾಲು ಗ್ರಾಮದ ಸಂಜೀವ ಪ್ರಭು ಎಂಬವರ ಅಡಿಕೆ ತೋಟವು ಭಾರಿ ಗಾಳಿಯಿಂದ ಹಾನಿಯಾಗಿದ್ದು ಅಂದಾಜು ಸುಮಾರು 50,000 ಸಾವಿರ ನಷ್ಟ ಸಂಭವಿಸಿದೆ. ನಿಟ್ಟೆ ಗ್ರಾಮದ ಸರಸು ಪೂಜಾರ್ತಿ ಕೈರೋಲಿ ಅವರ ಮನೆಗೆ ಮರ ಬಿದ್ದು ಅಂದಾಜು 50000 ನಷ್ಟ, ಕಾರ್ಕಳ ಬಂಗ್ಲೆಗುಡ್ಡೆ ಐಸಾಬಿ ಎಂಬವರ ಮನೆಗೆ ಮರಬಿದ್ದು ಅಂದಾಜು 40000 ನಷ್ಟ, ಹಿರ್ಗಾನ ಗ್ರಾಮದ ಕಿನ್ಯಾನಬೆಟ್ಟು ವಿಜಯ ಶೆಟ್ಟಿ ಎಂಬವರ ಮನೆಗೆ ಮರ ಬಿದ್ದು ಸುಮಾರು 30000 ನಷ್ಟ, ಮುಂಡ್ಕೂರು ಗ್ರಾಮದ ಕಲ್ಲಿಮಾರು ಶೋಭಾ ಪೂಜಾರಿರವರ ಮನೆಯ ಗೋಡೆ ಕುಸಿದಿದ್ದು ಅಂದಾಜು 50000 ನಷ್ಟ, ಕಾರ್ಕಳ ಉಚ್ಚಂಗಿ ನಗರದ ಸವಿತಾ ರವರ ಮನೆಗೆ ಅಡಿಕೆ ಮರ ಬಿದ್ದು ಅಂದಾಜು 25000 ನಷ್ಟ, ಮರ್ಣೆ ಗ್ರಾಮದ ಸುಕುಡಿಬೆಟ್ಟು ರಾಘು ಮೂಲ್ಯರವರ ದನದ ಕೊಟ್ಟಿಗೆಯು ಸಂಪೂರ್ಣ ಹಾನಿಯಾಗಿದ್ದು ಅಂದಾಜು 30000 ನಷ್ಟವಾಗಿದೆ.

ಕಣಂಜಾರು ಗ್ರಾಮದ ಜಯಂತಿರವರ ಕೊಟ್ಟಿಗೆ ಗೋಡೆ ಕುಸಿದು ಅಂದಾಜು 10000 ನಷ್ಟ, ಕುಕ್ಕುಂದೂರು ಗ್ರಾಮದ ಗೀತಾ ಎಂಬವರ ಮನೆಗೆ ಮರ ಬಿದ್ದು ಅಂದಾಜು 25000 ನಷ್ಟ, ಕಲ್ಯಾ ಗ್ರಾಮದ ಸ. ಹಿ. ಪ್ರಾ. ಶಾಲೆ ಕೈರಬೆಟ್ಟು ಆವರಣದ ಗೋಡೆಗೆ ಮರ ಬಿದ್ದು ಹಾನಿಯಾಗಿದ್ದು ಅಂದಾಜು 10000 ನಷ್ಟ, ಮಿಯಾರು ಗ್ರಾಮದ ಬರ್ಕೆರವರ ಪಂಪ್‌ಸೆಟ್‌ಗೆ ಮರ ಬಿದ್ದು ಹಾನಿಯಾಗಿದ್ದು 25000 ನಷ್ಟ, ಕಣಂಜಾರು ಗ್ರಾಮದ ಲೂರ್ಡ್ಸ ಇಂಗ್ಲಿಷ್ ಮಾಧ್ಯಮ ಶಾಲೆಯ ಶೌಚಾಲಯಕ್ಕೆ ಮರ ಬಿದ್ದು ಅಂದಾಜು 10000 ನಷ್ಟ,ಬೋಳ ಗ್ರಾಮದ ದಾರು ದೈವಸ್ಥಾನದ ಬಳಿ ಭಾರಿ ಗಾಳಿಯಿಂದಾಗಿ ಎರಡು ವಿದ್ಯುತ್ ಕಂಬಗಳು ತುಂಡಾಗಿ ಅಂದಾಜು 25000 ನಷ್ಟ, ಕಾರ್ಕಳ ಮಾರ್ಕೆಟ್ ಬಳಿ ಇಂದಿರಾ ಬಾಯಿರವರ ಮನೆಗೆ ಮರ ಬಿದ್ದು ಸುಮಾರು 1 ಲಕ್ಷ ನಷ್ಟ ಹಾಗೂ ಕಡ್ತಲ ಗ್ರಾಮದ ಅಡ್ಡಪಾದೆ ಗುಲಾಬಿ ಎಂಬುವವರ ಮನೆಯ ಗೋಡೆ ಕುಸಿದು ಅಂದಾಜು 60000 ಸಾವಿರ ನಷ್ಟ ಸಂಭವಿಸಿದೆ. ಒಟ್ಟು 5,40,000 ರೂ. ನಷ್ಟ ಸಂಭವಿಸಿದೆ.

 

                        

                          

                        

                          

 

Leave a Reply

Your email address will not be published. Required fields are marked *