ಹೆಬ್ರಿ : ಹೆಬ್ರಿ ತಾಲೂಕಿನ ಮುನಿಯಾಲು ಕೆ.ಪಿ.ಎಸ್ ನಲ್ಲಿ 1992-93 ನೇ ಸಾಲಿನ ಎಸ್ಎಸ್ಎಲ್ಸಿ ವಿದ್ಯಾರ್ಥಿಗಳಿಂದ ಸ್ನೇಹ ಸಮ್ಮಿಲನ, ಗುರುವಂದನಾ ಕಾರ್ಯಕ್ರಮ ಹಾಗು ನವೀಕೃತ ಸಭಾಭವನದ ಲೋಕಾರ್ಪಣೆ ನಡೆಯಿತು.
ಸರಕಾರಿ ಶಾಲೆಯಲ್ಲಿ ಓದಿದ ವಿದ್ಯಾರ್ಥಿಗಳು ಇಂದು ದೇಶ ವಿದೇಶಗಳಲ್ಲಿ ವಿವಿಧ ಉದ್ಯೊಗಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದು ಅವರೆಲ್ಲರೂ ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಸಂಭ್ರಮಪಟ್ಟರು. ತಾವು ಓದಿದ ಶಾಲೆಯ ಸಭಾಭವನವನ್ನು ಸುಮಾರು ಎರಡೂವರೆ ಲಕ್ಷ ಮೊತ್ತದಲ್ಲಿ ನವೀಕರಿಸಿ ತಮ್ಮ ಗುರುಗಳಾದ ನಾರಾಯಣ ಅಡಿಗರಿಂದ ಲೋಕಾರ್ಪಣೆಗೊಳಿಸಿದರು.
ಕೆ.ಪಿ.ಎಸ್. ಸ್ಕೂಲಿನ ಪ್ರಾಂಶುಪಾಲರಾದ ಶ್ರೀಮತಿ ಬೇಬಿ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಹಳೆ ವಿದ್ಯಾರ್ಥಿಗಳಿಂದ ತಮಗೆ ಪಾಠ ಮಾಡಿದ ಗುರುಗಳಾದ ನಾರಾಯಣ ಅಡಿಗ, ಶ್ರೀಮತಿ ಸ್ನೇಹಲತಾ ಟಿ.ಜಿ.ಆಚಾರ್ಯ, ಶ್ರೀಮತಿ ಜಯಶ್ರೀ ಹೆಗ್ಡೆ ಇವರನ್ನು ಈ ಸಂದರ್ಭದಲ್ಲಿ ಗೌರವಿಸಲಾಯಿತು.

ಅಥಿತಿಗಳಾಗಿ ಉಪ ಪ್ರಾಂಶುಪಾಲರಾದ ರವೀಂದ್ರ ರಾವ್, ಪ್ರಾಥಮಿಕ ಶಾಲಾ ಮುಖ್ಯೋಪಾಧ್ಯಾಯರಾದ ಶ್ರೀಮತಿ ಉಷಾ ಶೆಟ್ಟಿ, ಎಸ್.ಡಿ.ಎಮ್.ಸಿ ಉಪಾಧ್ಯಕ್ಷರಾದ ಹರೀಶ್ ಶೆಟ್ಟಿ, ಎಸ್.ಡಿ.ಎಮ್.ಸಿ. ಸದಸ್ಯರಾದ ಶಿಗೋಪಿನಾಥ ಭಟ್ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಹಳೆ ವಿದ್ಯಾರ್ಥಿಗಳು ತಮ್ಮ ಶಾಲಾ ದಿನಗಳ ನೆನಪುಗಳನ್ನು ಹಂಚಿಕೊAಡರು. ಶಿರಾಧಾಕೃಷ್ಣ ಪುತ್ತಿ ಅಥಿತಿಗಳನ್ನು ಸ್ವಾಗತಿಸಿದರು. ಪ್ರಸಾದ ಭಂಡಾರಿ ಕಾರ್ಯಕ್ರಮ ನಿರೂಪಿಸಿ, ಪ್ರದೀಪ್ ವಂದಿಸಿದರು.
ಸಭಾ ಕಾರ್ಯಕ್ರಮದ ಬಳಿಕ ಹರೀಶ್ ಶೆಟ್ಟಿ ಪಡುಕುಡೂರು ಇವರ ವತಿಯಿಂದ ಶಾಲಾ ಮಕ್ಕಳಿಗೆ ಸಿಹಿತಿಂಡಿಯನ್ನು ವಿತರಿಸಲಾಯಿತು.
ಕಾರ್ಯಕ್ರಮದ ಬಳಿಕ ತಾವು ಅಂದು ಕಲಿತ ತರಗತಿಗಳಲ್ಲಿ ಕುಳಿತು ತಮ್ಮ ಗುರುಗಳಿಂದ ಪಾಠ ಕೇಳಿಸಿಕೊಂಡು ಸಂಭ್ರಮಿಸಿದರು.















