ಕಾರ್ಕಳ: ಜಿಲ್ಲಾಧಿಕಾರಿಗಳು ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳ ಕಣ್ಣಿಗೆ ಕಾಣಿಸದ ಕಾನೂನು ಮೀರಿದ ಚಟುವಟಿಕೆ ಬಿಜೆಪಿ ಯುವ ಮೋರ್ಚಾಕ್ಕೆ ಕಂಡಿದ್ದು ನಿಜಕ್ಕೂ ವಿಸ್ಮಯ ಎಂದು ಕಾರ್ಕಳ ಯುವ ಕಾಂಗ್ರೆಸ್ ಅಧ್ಯಕ್ಷ ಯೋಗೀಶ್ ಆಚಾರ್ಯ ಇನ್ನಾ ಹೇಳಿದ್ದಾರೆ.
ಪುರಸಭಾ ಸದಸ್ಯ ಶುಭದ ರಾವ್ ವಿರುದ್ಧ ಬಿಜೆಪಿ ಯುವ ಮೋರ್ಚಾ ದೂರು ನೀಡಿರುವುದು ಹತಾಶೆಯ ಪ್ರತೀಕವಾಗಿದೆ.
ವಾರದ ಹಿಂದೆ ನಡೆದ ಜನಸ್ಪಂದನ ಕಾರ್ಯಕ್ರಮದಲ್ಲಿ ಕಾರ್ಕಳ ಶಾಸಕ ಸುನಿಲ್ ಕುಮಾರ್ ಅವರ ಕುಮ್ಮಕ್ಕಿನಿಂದ ನಡೆದ ಪೋಲೀಸ್ ದೌರ್ಜನ್ಯ ಹಾಗೂ ಅನ್ಯಾಯದ ವಿರುದ್ದ ಪ್ರತಿಭಟಿಸಿದ ಶುಭದ ರಾವ್ ವಿರುದ್ದ ಬಿಜೆಪಿ ಯುವ ಮೋರ್ಚ ನೀಡಿದ ದೂರು ಸಂಪೂರ್ಣವಾಗಿ ದುರುದ್ದೇಶದಿಂದ ಕೂಡಿದೆ. ಪರಶುರಾಮ ಥೀಂ ಪಾರ್ಕಿನ ಅಕ್ರಮ ಸದನದಲ್ಲಿ ಶಾಸಕರನ್ನು ಪೇಚಿಗೀಡುಮಾಡಿದ್ದು,ಈ ಹಿನ್ನೆಲೆಯಲ್ಲಿ ಶಾಸಕರು ಕಾರ್ಯಕರ್ತರನ್ನು ಬಳಸಿ ಸುಳ್ಳು ದೂರನ್ನು ದಾಖಲಿಸುತ್ತಿದ್ದಾರೆ,
ಶುಭದ ರಾವ್ ಅವರ ಮೇಲೆ ದೂರು ದಾಖಲಿಸಿ ನಿಮ್ಮ ಅಕ್ರಮಗಳಿಂದ ಬಚಾವ್ ಆಗುತ್ತೇವೆ ಎಂದು ಅಂದುಕೊಂಡರೆ ಅದು ನಿಮ್ಮ ಮೂರ್ಖತನ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಅಂದು ಪರಶುರಾಮನ ಪ್ರತಿಮೆಗೆ ಸುತ್ತಿಗೆಯಿಂದ ಹೊಡೆದ ಪಾಪದ ಫಲ ಅನುಭವಿಸಲೇ ಬೇಕು, ದಾರ್ಮಿಕ ನಂಬಿಕೆಗೆ ಘಾಸಿ ಮಾಡಿದ ಪಾಪಕ್ಕೆ ಕೇಸು ಹಾಕಿಸಿಕೊಂಡ ಯುವ ಮೋರ್ಚಾದ ಸದಸ್ಯರು ಪ್ರತಿಮೆಯ ಮೇಲಿನ ಭಾಗ ಎಲ್ಲಿದೆ ಮತ್ತು ಈಗಿರುವ ಅರ್ಧ ಪ್ರತಿಮೆ ಯಾವುದರಿಂದ ಮಾಡಲಾಗಿದೆ ಎಂದು ಮೊದಲು ತಿಳಿಸಲಿ ಎಂದು ಸವಾಲು ಹಾಕಿದ್ದಾರೆ.
ನಮ್ಮ ನಾಯಕರ ವಿರುದ್ದ ಕಾನೂನು ಕೈಗೆತ್ತಿಕೊಳ್ಳುವ ಬೆದರಿಕೆ ಹಾಕಿದ ಯುವಮೋರ್ಚವನ್ನು ಎದುರಿಸಿ ತಕ್ಕ ಪಾಠ ಕಲಿಸುವ ಶಕ್ತಿ ಯುವ ಕಾಂಗ್ರೆಸ್ಸಿಗೆ ಇದೆ ಎಂದು ಅವರು ಹೇಳಿಕೆಯಲ್ಲಿ ಎಚ್ಚರಿಸಿದ್ದಾರೆ.















