ಕಾರ್ಕಳ: ಮಕ್ಕಳ ಶಿಕ್ಷಣಕ್ಕೆ ಸಹಕಾರಿಯಾಗುವ ನಿಟ್ಟಿನಲ್ಲಿ ಕಾರ್ಕಳ ರೋಟರಿ ಸಂಸ್ಥೆಯಿಂದ ಸುಮಾರು 7 ಸಾವಿರ ವೆಚ್ಚದಲ್ಲಿ ಕೆರ್ವಾಶೆ ಶೆಟ್ಟಿಬೆಟ್ಟು ಸರಕಾರಿ ಶಾಲೆಗೆ ಗ್ರೀನ್ ಬೋರ್ಡ್ ನ ಕೊಡುಗೆಯನ್ನು ಸಂಸ್ಥೆಯ ಅಧ್ಯಕ್ಷರಾದ ರೋ ಇಕ್ಬಾಲ್ ಅಹಮದ್ ಹಸ್ತಾಂತರಿಸಿದರು.
ಈ ಸಂದರ್ಭದಲ್ಲಿ ಶಾಲಾ ಮಕ್ಕಳಿಗೆ ರೋಟರಿ ಸಂಸ್ಥೆ ವತಿಯಿಂದ ಸಿಹಿ ತಿಂಡಿಯನ್ನು ವಿತರಿಸಲಾಯಿತು.
ಈ ಸಂದರ್ಭದಲ್ಲಿ ಕಾರ್ಯದರ್ಶಿ ರೋ ಗಣೇಶ್ ಸಾಲಿಯನ್, ಕಾರ್ಕಳ ರೋಟರಿಯ ನಿರ್ದೇಶಕರುಗಳಾದ ರೋ ಹರ್ಷಿಣಿ ವಿಜಯರಾಜ್ ಶೆಟ್ಟಿ, ರೋ ಜ್ಯೋತಿ ಪದ್ಮನಾಭ ಬಂಡಿ, ರೋ ರೇಖಾ ಉಪಾಧ್ಯಾಯ, ರೋ ಮಮತಾ ಶೆಟ್ಟಿ, ಪ್ರಾಜೆಕ್ಟ್ ಡೈರೆಕ್ಟರ್ ರೋ ವಸಂತ ಎಂ, ಉಪಾಧ್ಯಕ್ಷರಾದ ರೋ ಬಾಲಕೃಷ್ಣ ದೇವಾಡಿಗ, ರೋ ಡಯಾಸ್ ಚರಿಯನ್ ಹಾಗೂ ಕೆರ್ವಶೆಯ ಶೆಟ್ಟಿ ಬೆಟ್ಟು ಸರಕಾರಿ ಶಾಲೆಯ ಶಿಕ್ಷಕ ವೃಂದ ಹಾಗೂ ಶಾಲೆಯ ಎಸ್ ಡಿಎಂಸಿ ಅಧ್ಯಕ್ಷರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು.















