ಕಾರ್ಕಳ: ವಯೋವೃದ್ಧ ಮಹಿಳೆಯೊಬ್ಬರ ಬ್ಯಾಂಕ್ ಖಾತೆಯಿಂದ ಚಾಲಾಕಿ ಕಳ್ಳರು ಬರೋಬ್ಬರಿ 3 ಲಕ್ಷ ದೋಚಿದ ಪ್ರಕರಣ ನಡೆದಿದೆ.
ಕಾರ್ಕಳದ ಸಾಜಿದಾ ಬಾನು(72) ಎಂಬವರ ಕೆನರಾ ಹಾಗೂ ಐಸಿಐಸಿಐ ಬ್ಯಾಂಕ್ ಖಾತೆಯಿಂದ ಹಂತಹಂತವಾಗಿ ಹಣವನ್ನು ವಿತ್ ಡ್ರಾ ಮಾಡಿ ಬರೋಬ್ಬರಿ 3 ಲಕ್ಷ ಹಣವನ್ನು ದೋಚಿ ವಂಚಿಸಿದ್ದಾರೆ.
ಜು 16 ರಂದು ಸಾಜಿದಾ ಬಾನು ಅವರ ಮೊಬೈಲಿಗೆ ಹಣ ಡೆಬಿಟ್ ಆದ ಮೆಸೇಜ್ ಬಂದಿದೆ. ಅವರು ಬ್ಯಾಂಕಿಗೆ ಹೋಗಿ ಖಾತೆಯನ್ನು ಪರಿಶೀಲಿಸಿದಾಗ ಒಟ್ಟು 6 ಬಾರಿ 3,00,001 ರೂ ಹಣವನ್ನು ಗ್ರೋ ಎನ್ನುವ ಖಾತೆಯ ವರ್ಗಾವಣೆ ಮಾಡಿರುವುದು ಬೆಳಕಿಗೆ ಬಂದಿದೆ.
ಈ ಕುರಿತು ಸಾಜಿದಾ ಬಾನು ಕಾರ್ಕಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.















