ಹೆಬ್ರಿ: ಸಾರ್ವಜನಿಕ ಶ್ರೀ ಗಣೇಶೋತ್ಸವ ಸಮಿತಿ ಮಾತಿಬೆಟ್ಟು-ಮೂಡುಕುಡೂರು ಇದರ 2024ನೇ ಸಾಲಿನ ಅಧ್ಯಕ್ಷರಾಗಿ ಮುದ್ದು ಪೂಜಾರಿ ಪೆರ್ಮಾನ್ ಹಾಗೂ ಕಾರ್ಯದರ್ಶಿಯಾಗಿ ರತ್ನಾಕರ ಪೂಜಾರಿ ಆಯ್ಕೆಯಾಗಿದ್ದಾರೆ.
ಮುನಿಯಾಲು ಬ್ರಹ್ಮಶ್ರೀ ನಾರಾಯಣ ಗುರು ಸಭಾಭವನದಲ್ಲಿ ನಡೆದ ಸಭೆಯಲ್ಲಿ ಆಯ್ಕೆ ಪ್ರಕ್ರಿಯೆ ನಡೆಯಿತು.
ಉಪಾಧ್ಯಕ್ಷರಾಗಿ ಚಂದ್ರಶೇಖರ ಶೆಟ್ಟಿಗಾರ್, ಕೋಶಾಧಿಕಾರಿಯಾಗಿ ಹರೀಶ್ ಪೂಜಾರಿ, ಜೊತೆ ಕಾರ್ಯದರ್ಶಿಯಾಗಿ, ಅಶ್ವಿತ್ ಶೆಟ್ಟಿ ಮೂಡುಕುಡೂರು ಆಯ್ಕೆಯಾಗಿರುತ್ತಾರೆ.
