ಕಾರ್ಕಳ:NMAMIT, NITTE ಆಯೋಜಿಸಿದ ಪ್ರಥಮ ವರ್ಷದ ಇಂಜಿನಿಯರಿAಗ್ ವಿದ್ಯಾರ್ಥಿಗಳಿಗೆ ಓರಿಯಂಟೇಷನ್ ಕಾರ್ಯಕ್ರಮದ ಅಂಗವಾಗಿ ಸ್ವಚ್ಛ ಕಾರ್ಕಳ ಬ್ರಿಗೇಡ್ ತಂಡದಿAದ ಜು.22 ರಂದು ಸ್ವಚ್ಛ ಭಾರತ್ ಕುರಿತು ಕಾರ್ಯಾಗಾರ ನಡೆಯಿತು.
ತಂಡದ ಸದಸ್ಯರಾದ ಸುಬ್ರಹ್ಮಣ್ಯ ದೇವಾಡಿಗ ಮತ್ತು ಯುವ ವಕೀಲರಾದ ಎಂ.ಕೆ.ವಿಪುಲತೇಜ್ ಅವರು ಕಳೆದ 5 ವರ್ಷಗಳಿಂದ ತಂಡವು ಮಾಡಿದ ಕೆಲಸಗಳು, ಎದುರಿಸಿದ ಸವಾಲುಗಳು, ತೆಗೆದುಕೊಂಡ ಕ್ರಮಗಳು ಮತ್ತು ಸ್ವಚ್ಛ ಭಾರತ್ ಮಿಷನ್‌ಗೆ ಇರುವ ಅಡೆತಡೆಗಳ ಬಗ್ಗೆ ವಿವರಿಸುವ ಮೂರು ಅವಧಿಗಳನ್ನು ನಡೆಸಿದರು. ಈ ಸಮಸ್ಯೆಗಳಿಗೆ ಪರಿಹಾರಗಳನ್ನು ನೀಡಲು ವಿದ್ಯಾರ್ಥಿಗಳನ್ನು ಕೇಳಲಾಯಿತು,. ಇದಕ್ಕೆ ಅವರು ಬಹುವಿಧದ ಆಲೋಚನೆಗಳು ಮತ್ತು ಪರಿಹಾರಗಳೊಂದಿಗೆ ಉತ್ಸಾಹದಿಂದ ಪ್ರತಿಕ್ರಿಯಿಸಿದರು. ವಿದ್ಯಾರ್ಥಿಗಳಿಗೆ ತ್ಯಾಜ್ಯದ ಬಗೆಗಳು ಮತ್ತು ತ್ಯಾಜ್ಯ ವಿಂಗಡಣೆಯ ಮಹತ್ವದ ಬಗ್ಗೆಯೂ ತಿಳಿಸಲಾಯಿತು.
ಸ್ವಚ್ಛ ಕಾರ್ಕಳ ಬ್ರಿಗೇಡ್‌ನ ಸದಸ್ಯೆ ಮತ್ತು ಅದೇ ಕಾಲೇಜಿನ ಪ್ರಾಧ್ಯಾಪಕರು ಡಾ.ಪ್ರಭಾ ನಿರಂಜನ್ ತಂಡದೊAದಿಗೆ ಇಂಟರ್ನ್ಶಿಪ್ ಮಾಡಲು ಮತ್ತು ವೈಜ್ಞಾನಿಕ ತ್ಯಾಜ್ಯ ನಿರ್ವಹಣೆಗೆ ಯೋಜನೆಗಳನ್ನು ರೂಪಿಸಲು ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸಿದರು.
ಬಳಿಕ ವಿದ್ಯಾರ್ಥಿಗಳು ಮತ್ತು ಸ್ವಚ್ಛ ಕಾರ್ಕಳ ಬ್ರಿಗೇಡ್ ಕಾಲೇಜು ಆವರಣದಲ್ಲಿ “ವೃಕ್ಷಾರೋಹಣ 2024” ಅಭಿಯಾನದ ಅಂಗವಾಗಿ ಸುಮಾರು 100 ಸಸಿಗಳನ್ನು ನೆಟ್ಟರು ಮತ್ತು ಅವರು ಪದವಿ ಪಡೆಯುವವರೆಗೆ ಅದನ್ನು ನೋಡಿಕೊಳ್ಳುವುದಾಗಿ ಪ್ರತಿಜ್ಞೆ ಮಾಡಿದರು.
NMAMIT ವಿದ್ಯಾರ್ಥಿ ಇಂಡಕ್ಷನ್ ಕಾರ್ಯಕ್ರಮದ ಸಂಯೋಜಕರಾದ ಶ್ರೀಮತಿ ಕರುಣಾ ಪಂಡಿತ್ ಕಾರ್ಯಕ್ರಮ ಆಯೋಜಿಸಿದರು. ಈ ಸ್ವಚ್ಛತಾ ಸಂವಾದದ ಕುರಿತು ಕಾರ್ಯಗಾರ ಆಯೋಜಿಸಿದ್ದಕ್ಕಾಗಿ ಪ್ರಾಂಶುಪಾಲ ಡಾ. ನಿರಂಜನ್ ಚಿಪ್ಳೂಣಕರ್ ಅವರಿಗೆ ಸ್ವಚ್ಛ ಕಾರ್ಕಳ ಬ್ರಿಗೇಡ್ ತಂಡ ಕೃತಜ್ಞತೆ ಸಲ್ಲಿಸಿತು.
