ಕಾರ್ಕಳ : ಜೀವನದ ಮಹತ್ತರ ಘಟ್ಟವನ್ನು ತಲುಪಲು ಮೊದಲು ನಕಾರಾತ್ಮಕ ಭಾವನೆಯನ್ನು ತೊಲಗಿಸಬೇಕು.ಸಮಾಜವನ್ನು ಪರಿವರ್ತನೆ ಮಾಡಲು ಯುವ ಜನತೆ ಮಹತ್ವಾಕಾಂಕ್ಷೆ, ಗುರಿ ಇಟ್ಟುಕೊಂಡು ಮುನ್ನಡೆಯಬೇಕು ಎಂದು ಯುವ ವಕೀಲರಾದ ರಾಕೇಶ್ ಸುವರ್ಣ ಹೇಳಿದರು.
ಅವರು ಎಸ್ ವಿ ಟಿ ವನಿತಾ ಪದವಿಪೂರ್ವ ಕಾಲೇಜು ಕಾರ್ಕಳ ಇಲ್ಲಿ ನಡೆದ ಕಾನೂನು ಅರಿವು ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಆಗಮಿಸಿ ಮಾಹಿತಿ ನೀಡಿದರು.
ವಿದ್ಯಾರ್ಥಿಗಳಿಗೆ, ಮಕ್ಕಳ ಸುರಕ್ಷತೆ ಮತ್ತು ರಕ್ಷಣೆಯು ಅತ್ಯಂತ ಮಹತ್ವದ್ದಾಗಿರುವ ಜಗತ್ತಿನಲ್ಲಿ ಶಾಸಕಾಂಗ ಚೌಕಟ್ಟುಗಳು ಪ್ರಮುಖವಾಗಿವೆ. ಮಕ್ಕಳ ಹಕ್ಕುಗಳು ಮತ್ತು ಮುಗ್ಧತೆಯನ್ನು ಕಾಪಾಡುವ, ಭಾರತೀಯ ಕಾನೂನಿನ ಒಂದು ಭಾಗವೆಂದರೆ ಲೈಂಗಿಕ ಅಪರಾಧಗಳಿಂದ ಮಕ್ಕಳ ರಕ್ಷಣೆ (ಪೋಕ್ಸೊ) ಕಾಯಿದೆ.ಇದನ್ನು 2012 ರಲ್ಲಿ ಕಾನೂನಾಗಿ ಜಾರಿಗೆ ಬಂದ ಪೋಕ್ಸ್ ಕಾಯಿದೆಯು ನಮ್ಮ ಸಮಾಜದ ಕನಿಷ್ಠ ಅದೃಷ್ಟವಂತ ನಾಗರಿಕರಿಗೆ ಭರವಸೆಯ ಮಿನುಗು, ಅವರಿಗೆ ರಕ್ಷಣೆ ಮತ್ತು ನ್ಯಾಯವನ್ನು ಖಾತರಿಪಡಿಸುತ್ತದೆ ಎಂದರು,
ಅಶ್ಲೀಲತೆ, ಆಕ್ರಮಣ, ಲೈಂಗಿಕ ಕಿರುಕುಳ ಮತ್ತು ಲೈಂಗಿಕ ದೌರ್ಜನ್ಯದಿಂದ ಚಿಕ್ಕ ಮಕ್ಕಳನ್ನು ರಕ್ಷಿಸುವುದು ಕಾಯಿದೆಯ ಗುರಿಯಾಗಿದೆ ಎಂದರು .
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್.ವಿ.ಟಿ ವನಿತಾ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ರಾಮದಾಸ್ ಪ್ರಭು ವಹಿಸಿದ್ದರು. ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕರಾದ ಯೋಗೇಂದ್ರ ನಾಯಕ್ ಉಪಸ್ಥಿತರಿದ್ದರು. ಸಮಾಜಶಾಸ್ತ್ರ ಉಪನ್ಯಾಸಕರಾದ ಪ್ರಭಾತ್ ರಂಜನ್ ಸ್ವಾಗತಿಸಿದರು. ಕನ್ನಡ ಭಾಷಾ ಉಪನ್ಯಾಸಕರಾದ ಪದ್ಮಪ್ರಭ ಇಂದ್ರ ಕಾರ್ಯಕ್ರಮ ನಿರೂಪಿಸಿ ವಂದಿಸಿದರು.

`