ಕಾರ್ಕಳ : ಕಾರ್ಕಳದ ಎಸ್ ವಿ ಟಿ ವನಿತಾ ಪದವಿಪೂರ್ವ ಕಾಲೇಜಿನಲ್ಲಿ ಇಂಟರ್ಯಾಕ್ಟ್ ಕ್ಲಬ್ ನ ಪದಪ್ರದಾನ ಕಾರ್ಯಕ್ರಮ ನಡೆಯಿತು.
ರೋಟರಿ ಕ್ಲಬ್ ಕಾರ್ಕಳದ ಅಧ್ಯಕ್ಷರಾದ ರೊ. ಇಕ್ಬಾಲ್ ಅಹಮದ್ ಅಧ್ಯಕ್ಷತೆ ವಹಿಸಿ ಮಾತನಾಡಿ, 2024-25 ನೇ ಸಾಲಿನ ಇಂಟರ್ಯಾಕ್ಟ್ ಕ್ಲಬ್ ನ ನೂತನ ಅಧ್ಯಕ್ಷೆ ಪ್ರಥಮ ವಾಣಿಜ್ಯ ವಿಭಾಗ ಕು. ಅನ್ವಿತಾ ಮತ್ತು ಅವರ ತಂಡಕ್ಕೆ ಪದಪ್ರದಾನ ನಡೆಸಿ ಶುಭ ಹಾರೈಸಿದರು.
ಇಂಟರ್ಯಾಕ್ಟ್ ಸಭಾಪತಿ ರೊ. ಜ್ಯೋತಿ ಪದ್ಮನಾಭ ಅವರು ಇಂಟರ್ಯಾಕ್ಟ್ ಕ್ಲಬ್ ನ ಧ್ಯೇಯೋದ್ದೇಶ ಮತ್ತು ಕಾರ್ಯ ಚಟುವಟಿಕೆಗಳ ಬಗ್ಗೆ ಪ್ರಾಸ್ತಾವಿಕ ಮಾತನಾಡಿದರು.
ರೋಟರಿಯ ನಿಯೋಜಿತ ಅಧ್ಯಕ್ಷ ನವೀನ್ ಶೆಟ್ಟಿ,ರೊ.ಬಾಲಕೃಷ್ಣ ದೇವಾಡಿಗ , ರೊ. ಶೈಲೇಂದ್ರ ರಾವ್, ರೊ.ಸುರೇಶ್ ನಾಯಕ್, ರೊ. ವಸಂತ ಎಂ, ರೊ. ಅರುಣ್ ಕುಮಾರ್ ಕಾಲೇಜಿನ ಪ್ರಾಂಶುಪಾಲರಾದ ರಾಮದಾಸ್ ಪ್ರಭು, ಮುಖ್ಯೋಪಾಧ್ಯಾಯರಾದ ಯೋಗೇಂದ್ರ ನಾಯಕ್, ಉಪಸ್ಥಿತರಿದ್ದರು.
ಇಂಟರ್ಯಾಕ್ಟ್ ಅಧ್ಯಕ್ಷೆ ಕು. ಅನ್ವಿತಾ ತನ್ನ ತಂಡವನ್ನು ಪರಿಚಯಿಸಿದರು.
ಇಂಟರ್ಯಾಕ್ಟ್ ಕ್ಲಬ್ ನ ಸಂಯೋಜಕ ದೇವದಾಸ್ ಕೆರೆಮನೆ ಸ್ವಾಗತಿಸಿದರು. ಕಾರ್ಯದರ್ಶಿ ಕು.ಸಮೀಕ್ಷಾ ವಂದಿಸಿದರು. ವಿದ್ಯಾರ್ಥಿ ಸಂಘದ ಅಧ್ಯಕ್ಷೆ ಕು. ಅಮೃತಾ ನಿರೂಪಿಸಿದರು.

`