ಕಾರ್ಕಳ: ಕಾರ್ಕಳ: ಜಾಗ ಮಾರಾಟ ಮಾಡಿದ ವಿಚಾರದ ತಕಾರರಿಗೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ನಡೆದ ಪ್ರಕರಣ ಕಾರ್ಕಳದ ತೆಳ್ಳಾರು ರಸ್ತೆಯಲ್ಲಿ ಬುಧವಾರ ಮುಂಜಾನೆ ನಡೆದಿದೆ.
ಕಾರ್ಕಳ ತಾಲೂಕು ತೆಳ್ಳಾರು ರಸ್ತೆ ದಿನೇಶ್ (48) ಎಂಬವರು ಕಾರ್ಕಳ ಕಸಬಾದ ಸ ನಂ 530/2 ರಲ್ಲಿ ವಾಸಿಸುತ್ತಿದ್ದು ಈ ಜಾಗದ ಹತ್ತಿರದಲ್ಲಿರುವ ಅದೇ ಸ. ನಂಬ್ರದಲ್ಲಿ 0-20 ಸೆಂಟ್ಸ್ ಜಾಗವನ್ನು ದಿನೇಶ್ ತಾಯಿ ಕಲ್ಯಾಣಿ ರವರು ಭೋಜ ಎಂಬವರಿಗೆ ಮಾರಾಟ ಮಾಡುತ್ತೇನೆಂದು 30 ವರ್ಷದ ಹಿಂದೆ ಕರಾರು ಮಾಡಿಕೊಂಡಿದ್ದು ಭೋಜ ರವರು ಆ ಜಾಗದಲ್ಲಿ ಹಂಚಿನ ಮನೆಯನ್ನು ಕಟ್ಟಿದ್ದು ಆ ಜಾಗವನ್ನು ಅಳತೆ ಮಾಡುವ ಸಮಯ ಸರ್ವೆಯವರ ತಪ್ಪು ಎಣಿಕೆಯಿಂದ ಅದೇ ಸರ್ವೆ ನಂಬ್ರದಲ್ಲಿರುವ ಕಾರ್ಕಳ ವೆಂಕಟರಮಣ ದೇವಸ್ಥಾನದ ಜಾಗದಲ್ಲಿ ಮನೆಯನ್ನು ಕಟ್ಟಿದ್ದು ಅವರು ತಪ್ಪಾದ ಜಾಗದಲ್ಲಿ ಮನೆಯನ್ನುಕಟ್ಟಿರುವುದು ತಿಳಿದುಬಂದ ನಂತರ ದಿನೇಶ್ರವರು ಜಾಗವನ್ನು ಮರು ಅಳತೆ ಮಾಡಿ ಸ ನಂ 530/2 ರಲ್ಲಿ ಸರಿಯಾದ ಜಾಗವನ್ನು ಕ್ರಯಸಾಧನ ಮಾಡಿಕೊಟ್ಟಿದ್ದು , ಸದ್ರಿ ಸ್ಥಿರಾಸ್ತಿಯಲ್ಲಿ ಭೋಜ ರವರು ಮನೆ ಕಟ್ಟಿದ ನಂತರ ಈ ಹಿಂದೆ ದೇವಸ್ಥಾನದ ಜಾಗದಲ್ಲಿಕಟ್ಟಿದ ಮನೆಯನ್ನು ಖಾಲಿ ಮಾಡಿ ಮನೆಯನ್ನು ದೇವಸ್ಥಾನಕ್ಕೆ ಬಿಟ್ಟುಕೊಡಬೇಕು ಎಂಬ ವಿಶ್ವಾಸದ ಮೇಲೆ ಭೋಜ ಮತ್ತು ಅವರ ತಮ್ಮ ದಿನೇಶ ರವರ ಸಮ್ಮುಖದಲ್ಲಿ ದಿನೇಶ್ರವರ ತಾಯಿಯ ಪರವಾಗಿ ದಿನೇಶ್ರವರ ಸಹೋದರ ರಮೇಶ ರವರು ಭೋಜ ರವರಿಗೆ ರೂ 75,000/ ಹಣವನ್ನು ನೀಡಿರುತ್ತಾರೆ.
ಪ್ರಸ್ತುತ ಸದ್ರಿ ಹಂಚಿನ ಮನೆಯನ್ನು ಪ್ರಸನ್ನ ಮತ್ತು ಜಯಲಕ್ಷ್ಮಿ ಎಂಬವರಿಗೆ ಬಾಡಿಗೆಗೆ ನೀಡಿದ್ದು ಈ ಸ್ಥಿರಾಸ್ತಿಯನ್ನು ಜಯಲಕ್ಷ್ಮಿರವರ ಹೆಸರಿನಲ್ಲಿ ಮಾಡಲು ದಿನೇಶ್ರವರೇ ಹೇಳಿರಬಹುದೆಂದು ಸಂಶಯದಿಂದ ಭೋಜರವರ ಮಗ ವಿಶ್ವನಾಥ ರವರು ಬುಧವಾರ ಬೆಳಿಗ್ಗೆ ದಿನೇಶ್ರವರ ಅಂಗಳಕ್ಕೆ ಅಕ್ರಮ ಪ್ರವೇಶ ಮಾಡಿ ಅವರ ಮೇಲೆ ಹಲ್ಲೆ ನಡೆಸಿದ್ದಾರೆ.
ಈ ಕುರಿತು ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.


`