ಕಾರ್ಕಳ : ತಾಲೂಕಿನ ಬೆಳ್ಮಣ್ ಜಂತ್ರ ಎಂಬಲ್ಲಿ ಜು.29 ರ ಸೋಮವಾರ ತಡರಾತ್ರಿ ಮನೆಯೊಂದರಲ್ಲಿ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು ಸುಮಾರು 50,000 ನಷ್ಟ ಸಂಭವಿಸಿದೆ
ಮಧ್ಯರಾತ್ರಿ ಸುಮಾರು 1.40ರ ವೇಳೆಗೆ ಬೆಂಕಿ ಕಾಣಿಸಿಕೊಂಡಿದ್ದು,ಕೂಡಲೇ ಸ್ಥಳಕ್ಕೆ ಧಾವಿಸಿದ ಕಾರ್ಕಳ ಅಗ್ನಿಶಾಮಕ ದಳದ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿ ಹೆಚ್ಚಿನ ಪ್ರಮಾಣದ ಅನಾಹುತವನ್ನು ತಪ್ಪಿಸಿದ್ದಾರೆ.
ಕಾರ್ಯಚರಣೆಯಲ್ಲಿ ಸಿಬ್ಬಂದಿಯವರಾದ ರೂಪೇಶ್ , ಹರಿಪ್ರಸಾದ್ ಶೆಟ್ಟಿಗಾರ್ , ಸಂಜಯ ಮುಝಮಿಲ್ , ಭೀಮಪ್ಪ ನರಹಟ್ಟಿ ಭಾಗಿಯಾಗಿದ್ದರು.
`